ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗರಡಿಬೈಲ್ ಶ್ರೀ ಉಳ್ಳಾಕ್ಳು,ಶ್ರೀ ಕಾಚು ಕುಜುಂಬ ದೈವಸ್ಥಾನದಲ್ಲಿ ಕಳೆದ ತಿಂಗಳು ನಡೆದ ಸ್ವರ್ಣ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ದಿನಾಂಕ ಮೇ.15ರಂದು ಶುಕ್ರವಾರ ಬೆಳಗ್ಗೆ 8.30ಕ್ಕೆ ದೇಗುಲದ ಎದುರು ಇರುವ

ಚಾವಡಿಯಿಂದ ಶ್ರೀ ಉಳ್ಳಾಕ್ಳು ದೈವ ಹಾಗೂ ಶ್ರೀ ಕಾಚು ಕುಜುಂಬ ದೈವಗಳ ಭಂಡಾರಗಳನ್ನು ಗರಡಿಬೈಲ್ ದೈವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆಗೊಂಡು ಹೋಗಿ ಅಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಸಾನಿಧ್ಯ ಕಲಶಪೂಜೆ,ದೈವಸ್ಥಾನದಲ್ಲಿ ಹೊಸ ಮಂಚ ಪ್ರತಿಷ್ಠೆ, ದೈವಗಳಿಗೆ ಸಾನಿಧ್ಯ ಕಲಶಾಬಿಷೇಕ, ತಂಬಿಲ ಸೇವೆ,ಸಂಕ್ರಮಣ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸ ಬೇಕಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ವಿನಂತಿಸಿದ್ದಾರೆ.













