ಸುಳ್ಯ:ಸುಳ್ಯ ತಹಸೀಲ್ದಾರ್ ಮಂಜುಳಾ ಎಂ. ಅವರಿಗೆ ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿಯಾಗಿ ಮುಂಬಡ್ತಿ ದೊರೆತಿದೆ.ಗ್ರೇಡ್-1 ವೃಂದದ ಅಧಿಕಾರಿಯಿಂದ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಕಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಿಸಿ ಸರಕಾರ ಆದೇಶ ಹೊರಡಿಸಿದೆ. ಪ್ರಸ್ತುತ
ಸುಳ್ಯ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುಳಾ ಎಂ. ಅವರು ಇದೀಗ ಕೆಎಎಸ್ ಕಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಣಗೊಂಡು ಮುಂದಿನ ಆದೇಶದವರೆಗೆ ಸುಳ್ಯ ತಹಶೀಲ್ದಾರ್ ಹುದ್ದೆಯಲ್ಲಿಯೇ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.








