ಸುಳ್ಯ:ಸುಳ್ಯ-ಕೊಡಿಯಾಲಬೈಲು- ದುಗ್ಗಲಡ್ಕ ರಸ್ತೆಯ ಅಭಿವೃದ್ಧಿಗೆ 12 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. 50-54 ಯೋಜನೆಯಲ್ಲಿ ರಸ್ತೆಯ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ ತಿಳಿಸಿದ್ದಾರೆ. ಸುಳ್ಯ ತಾಲೂಕು
ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ರಸ್ತೆಯಲ್ಲಿ ಕಾಂಕ್ರೀಟ್ ಆದ ಭಾಗ ಹೊರತು ಪಡಿಸಿ ಉಳಿದ ಭಾಗ ಅಗಲೀಕರಣವಾಗಿ ಅಭಿವೃದ್ಧಿ ಆಗಲಿದೆ ಎಂದು ಅವರು ಹೇಳಿದರು.
ಸುಳ್ಯ- ಕೊಡಿಯಾಲಬೈಲು- ದುಗ್ಗಲಡ್ಕ ಮಾರ್ಗದಲ್ಲಿ ಬಸ್ ಸರ್ವೀಸ್ ಆರಂಭಿಸಿ ನಿಲ್ಲಿಸಿರುವುದರ ಸಭೆಯಲ್ಲಿ ಬಗ್ಗೆ ಚರ್ಚೆ ನಡೆಯಿತು. ಅಗಲ ಕಿರಿದಾದ ಮತ್ತು ರಸ್ತೆಯ ದುರವಸ್ಥೆಯ ಕಾರಣ ಬಸ್ ಬಸ್ ಸಂಚಾರ ನಿಲ್ಲಿಸಲಾಗಿದೆ ಅಧಿಕಾರಿಗಳು ಎಂದು ತಿಳಿಸಿದರು.ರಸ್ತೆ ಸದ್ಯದಲ್ಲಿಯೇ ಅಭಿವೃದ್ದಿ ಪೂರ್ತಿಗೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಕ್ಷರು ಹೇಳಿದರು.








