ಸುಳ್ಯ:ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಹಾಗೂ ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ 55ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ
ಅ.16 ರಿಂದ 24 ವರೆಗೆ ಅದ್ದೂರಿಯಾಗಿ ನಡೆಯಲಿದೆ.ವೈದಿಕ, ಧಾರ್ಮಿಕ ಹಾಗು
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾದ ಅಂಗವಾಗಿ ಅ.16 ರಂದು ಮುಂಜಾನೆ ಗಣಪತಿ ಹವನದೊಂದಿಗೆ ಪ್ರಾರಂಭಗೊಂಡು ಬೆಳಗ್ಗೆ 9ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠಾ ಮೆರವಣಿಗೆ ನಡೆದು 11:02 ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯಲಿದೆ.ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಸಂಜೆ 7 ರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. ಎರಡನೇ ಅ.17ರಂದು ಮಧ್ಯಾಹ್ನ ಮಹಾಪೂಜೆ ಸಂಜೆ 6ರಿಂದ ಭಜನೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ನೃತ್ಯ ವೈಭವ ನಡೆಯಲಿದೆ ಅ.18 ರಂದು ಮಕ್ಕಳ ದಸರಾ, ಸಂಜೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಅ.19 ರಂದು ಮಹಿಳಾ ದಸರಾ , ಸಂಜೆ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಅ.20 ರಂದು ಆಯುಧ ಪೂಜೆ ಬಳಿಕ ಸಂಜೆ ಭಜನೆ, ನೆನಪು ನಿನಾದ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ನಡೆಯಲಿದೆ.ಅ.21ರಂದು ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ. ಸಂಜೆ ಭಜನೆ, ಡ್ಯಾನ್ಸ್ ಡ್ಯಾನ್ಸ್, ಡಾನ್ಸ್ ಕಾರ್ಯಕ್ರಮ, ಅ.22 ರಂದು ಸಂಜೆ 7ರಿಂದ ಸಾರ್ವಜನಿಕ ಶ್ರೀ ಚಂಡಿಕಾ ಮಹಾಯಾಗ ನಡೆಯಲಿದೆ. ಜೊತೆಗೆ ಮಹಿಳೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ ಅ.23 ರಂದು

ಖ್ಯಾತ ಹಿನ್ನಲೆ ಗಾಯಕಿ ಅಖಿಲ ಪಜಿಮಣ್ಣು ,ಗಣೇಶ್ ಕಾರಂತ್ ,ಅಮಿಶ್, ವೈಷ್ಣವಿ ಕಿಣಿ ಹಾಗೂ ರೇಡಿಯೋ ಜಾಕಿ ಆರ್ ಜೆ ಅನುರಾಗ್ ನಿರೂಪಣೆಯೊಂದಿಗೆ ಮ್ಯೂಸಿಕ್ ಹಂಗಾಮದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದರು. ಅ.24ದು ಸುಳ್ಯ ದಸರಾದ ಶ್ರೀ ಶಾರದೆಯ ವೈಭವದ ಶೋಭಾಯಾತ್ರೆಯೊಂದಿಗೆ
ದಸರಾ ಸಂಪನ್ನಗೊಳ್ಳಲಿದೆ.
ವಿಶೇಷ ಅಲಂಕಾರ, ವಿದ್ಯುತ್ ದೀಪಗಳದ ಅಲಂಕೃತಗೊಂಡ ಶ್ರೀ ದೇವಿಯ ಶೋಭಾಯಾತ್ರೆಯು ಚೆಂಡೆ, ವಾದ್ಯ ಘೋಷ, ಆಕರ್ಷಕ ಸ್ಥಬ್ದ ಚಿತ್ರಗಳೊಂದಿಗೆ ಸುಳ್ಯ ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಿ ಪಯಸ್ವಿನಿ ನದಿಯಲ್ಲಿ ಜಲಸ್ಥಂಭನಗೊಳ್ಳಲಿದೆ.
ಎಂದು ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಹಾಗು ದಸರಾ ಸಮೂಹ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.









