ಬೆಂಗಳೂರು: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿಯ ಕರಡು ಅಧಿಸೂಚನೆಯನ್ನು ಸರಕಾರ ಪ್ರಕಟಿಸಿದೆ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಒಟ್ಟು ಸ್ಥಾನಗಳ ಸಂಖ್ಯೆ, ವರ್ಗವಾರು ಮೀಸಲಾತಿ ಬುಧವಾರ ಪ್ರಕಟಿಸಿತ್ತು. ಇದೀಗ
ಕ್ಷೇತ್ರವಾರು ಮೀಸಲಾತಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದೆ. ಸುಳ್ಯ ತಾಲೂಕಿನಲ್ಲಿ 3 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, 11 ತಾಲೂಕು ಪಂಚಾಯತ್ ಕ್ಷೇತ್ರಗಳಿವೆ.
ಜಿ.ಪಂ.ಕ್ಷೇತ್ರಗಳಲ್ಲಿ
1 ಬೆಳ್ಳಾರೆ ಜಿ.ಪಂ.ಕ್ಷೇತ್ರ- ಸಾಮಾನ್ಯ ಮಹಿಳೆ,
2 ಜಾಲ್ಸೂರು ಜಿ.ಪಂ.ಕ್ಷೇತ್ರ- ಸಾಮಾನ್ಯ.
3 ಗುತ್ತಿಗಾರು ಜಿ.ಪಂ.ಕ್ಷೇತ್ರ- ಹಿಂದುಳಿದ ವರ್ಗ ಎ ವಿಭಾಗಕ್ಕೆ ಮೀಸಲಾಗಿದೆ.
ಸುಳ್ಯ ತಾಲೂಕು ಪಂಚಾಯತ್ನಲ್ಲಿ 11 ಸ್ಥಾನಗಳಿದ್ದು 6 ಸ್ಥಾನ ಮಹಿಳೆಗೆ ಮೀಸಲಾಗಿದೆ.
ಸಾಮಾನ್ಯ ವರ್ಗಕ್ಕೆ 6 ಸ್ಥಾನ ಇದೆ(3 ಮಹಿಳೆ), ಅನುಸೂಚಿತ ಜಾತಿ 2(1ಮಹಿಳೆ), ಅನುಸೂಚಿತ ಪಂಗಡ1(ಮಹಿಳೆ), ಹಿಂದುಳಿದ ವರ್ಗ ಎ 2(1 ಮಹಿಳೆ) ಎಂಬಂತೆ ಮ ಪ್ರಕಟವಾಗಿದೆ.
1 ಬೆಳ್ಳಾರೆ-ಅನುಸೂಚಿತ ಜಾತಿ.
2 ಬಾಳಿಲ-ಸಾಮಾನ್ಯ ಮಹಿಳೆ.
3 ಐವರ್ನಾಡು-ಸಾಮಾನ್ಯ.
4 ಜಾಲ್ಸೂರು-ಸಾಮಾನ್ಯ ಮಹಿಳೆ.
5 ಅಜ್ಜಾವರ-ಅನುಸೂಚಿತ ಜಾತಿ ಮಹಿಳೆ.
6 ಆಲೆಟ್ಟಿ-ಅನುಸೂಚಿತ ಪಂಗಡ ಮಹಿಳೆ.
7 ಅರಂತೋಡು- ಹಿಂದುಳಿದ ವರ್ಗ ಎ ಮಹಿಳೆ.
8 ಮಡಪ್ಪಾಡಿ- ಸಾಮಾನ್ಯ,
9 ನೆಲ್ಲೂರು ಕೆಮ್ರಾಜೆ- ಸಾಮಾನ್ಯ ಮಹಿಳೆ
10 ಗುತ್ತಿಗಾರು-ಹಿಂದುಳಿದ ವರ್ಗ ಎ
11 ಪಂಜ- ಸಾಮಾನ್ಯ ವರ್ಗ ಕ್ಕೆ ಮೀಸಲಾಗಿದೆ.
ಮೀಸಲಾತಿ ಬಗ್ಗೆ ಆಕ್ಷೇಪಣೆಗಳು ಇದ್ದರೆ 10 ದಿನಗಳಲ್ಲಿ ಅಂದರೆ ಅ.19ರಂದು ಸಂಜೆ 5 ಗಂಟೆಯ ಒಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.







