ಶ್ರೀಹರಿಕೋಟ: ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಕಾಂಕ್ಷೆಯ ‘ಆದಿತ್ಯ ಎಲ್–1’ ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ.ಶನಿವಾರ ಬೆಳಿಗ್ಗೆ (ಸೆ.2) 11.50ಕ್ಕೆ ಇಲ್ಲಿನ
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್–1 ಉಪಗ್ರಹ ಹೊತ್ತ ಪಿಎಸ್ಎಲ್ವಿ–ಸಿ 57 ರಾಕೆಟ್ ನಭಕ್ಕೆ ಚಿಮ್ಮಲಿದೆ. ಉಡಾವಣಾ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ಪರೀಕ್ಷೆಗಳನ್ನು ಇಸ್ರೊ ಪೂರ್ಣಗೊಳಿಸಿದ್ದು, ಉಡ್ಡಯನಕ್ಕೆ ಸನ್ನದ್ಧಗೊಂಡಿದೆ.
ಸೂರ್ಯನ ಅಧ್ಯಯನ ನಡೆಸಲು ಇಸ್ರೊ ಹಮ್ಮಿಕೊಂಡಿರುವ ಚೊಚ್ಚಲ ಯೋಜನೆ ಇದಾಗಿದ್ದು, ಒಟ್ಟು ಏಳು ಉಪಕರಣಗಳು ಇರಲಿವೆ.ಚಂದ್ರಯಾನ–3 ಯಶಸ್ಸಿನ ಬೆನ್ನಲ್ಲೇ ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ಇಸ್ರೊ ಸಿದ್ಧತೆ ನಡೆಸಿದೆ.