ಮಂಗಳೂರು:72ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ರಂಗಭೂಮಿ ಕಲಾವಿದೆ ರೂಪಶ್ರೀ ವರ್ಕಾಡಿ, ಬಾಲನಟ ಆತೀಶ್ ಎಸ್. ಶೆಟ್ಟಿ, ಸುಮಂತ್ ಭಟ್ ಹಾಗೂ ಸಿನಿಮಾಧಾರಿತ ಉತ್ತಮ ಪುಸ್ತಕ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿರುವ ಡಾ.ಪ್ರದೀಪ್ ಕೆಂಚನೂರು ಅವರು ಬುಧವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.ವಿಮಾನ ನಿಲ್ದಾಣದಲ್ಲಿ
ಆತ್ಮೀಯರು, ಹಿತೈಷಿಗಳು ಸ್ವಾಗತ ಕೋರಿದರು. “ಮಿಥ್ಯಾ” ಕನ್ನಡ ಸಿನಿಮಾ ಮೂರು ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದ್ದು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಚಿತ್ರದ ಬರಹಗಾರ ಹಾಗೂ ನಿರ್ದೇಶಕ ಸುಮಂತ್ ಭಟ್, ಬಾಲನಟ ಆತೀಶ್ ಎಸ್. ಶೆಟ್ಟಿ, ಪೋಷಕ ನಟಿ ರೂಪಶ್ರೀ ವರ್ಕಾಡಿ ಮಂಗಳವಾರ ಗುಜರಾತ್ಜಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.ಸುಳ್ಯದ
ಗಾಂಧಿನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪಿ.ಯು.ವಿಭಾಗದ ಉಪನ್ಯಾಸಕರಾದ ಕುಂದಾಪುರದವರಾದ ಡಾ.ಪ್ರದೀಪ್ ಕೆಂಚನೂರು ಅವರು ‘ನಾನಿರುವುದು ನಿಮಗಾಗಿ…ನಾಡಿರುವುದು ನನಗಾಗಿ…ಕನ್ನಡ ಚಲನಚಿತ್ರದ ತತ್ವ ಮತ್ತು ರಾಜಕೀಯ’ಎಂಬ ಕನ್ನಡ ಚಲನಚಿತ್ರಗಳ ತತ್ವ ಮತ್ತು ರಾಜಕೀಯದ ಕುರಿತು ಬರೆದ ಪುಸ್ತಕಕ್ಕೆ ಚಲನಚಿತ್ರ ಪುಸ್ತಕ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.ಗುಜರಾತ್ಜಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.







