ಸುಳ್ಯ:ಅಮೃತಭವನ ಶಟಲ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟದಲ್ಲಿ ಕೃಷ್ಣ ಪ್ರಸಾದ್ ನಾಯಕತ್ವದ ತಂಡ ಪ್ರಥಮ ಸ್ಥಾನ ಹಾಗೂ ಮುಹಮ್ಮದ್ ಕೈಫ್ ನಾಯಕತ್ವದ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಚಾಂಪಿಯನ್ ತಂಡದಲ್ಲಿ ಕೃಷ್ಣಪ್ರಸಾದ್, ಪ್ರಮೋದ್ ನಾಯಕ್, ಸೆಲ್ವಿನ್ ರಾಜ್, ಸುರೇಶ್ ನಾಗಪಟ್ಟಣ ಆಡಿದ್ದರು. ರನ್ನರ್ಸ್ ಅಪ್ ಆದ ತಂಡದಲ್ಲಿ
ಮುಹಮ್ಮದ್ ಕೈಫ್, ಸುರೇಂದ್ರ ನಾಗಪಟ್ಟಣ, ಪ್ರಶಾಂತ್ ಕುಮಾರ್ ಕೋಟಕ್ಕಲ್, ಚಂದನ್ ಆಡಿದ್ದರು. ಶ್ರೇಯಸ್. ಎಸ್ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು.ಪತ್ರಕರ್ತ ಗಂಗಾಧರ ಕಲ್ಲಪಳ್ಳಿ
ವಿಜೇತರಿಗೆ ಬಹುಮಾನ ವಿತರಿಸಿದರು.


ಕಾರ್ತಿಕ್ ನಾಗಪಟ್ಟಣ,ವಿಜಯ್ ನಾಗಪಟ್ಟಣ,ಮುಹಮ್ಮದ್ ಸೈಫ್, ತಝ್ವಿತ್ ನಾಗಪಟ್ಟಣ,ಡಾ.ಸೌರಭ್, ಧನುಶ್ ಎಸ್, ಇಂಚರ, ಮಣಿಕಂಠ, ತಹಲತ್ ಮತ್ತಿತರರು ಇದ್ದರು. ಅಮೃತಭವನದಲ್ಲಿ ದಿನಾಲು ಶಟಲ್ ಬ್ಯಾಡ್ಮಿಂಟನ್ ಆಡುವ
ಆಟಗಾರರ ಪೈಕಿ ತಲಾ 4 ಆಟಗಾರರನ್ನು ಒಳಗೊಂಡ 5 ತಂಡಗಳ ಮಧ್ಯೆ ಲೀಗ್ ಮಾದರಿಯಲ್ಲಿ ಪಂದ್ಯಾಟ ಆಯೋಜಿಸಲಾಗಿತ್ತು.














