ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಕೊನೆಯ ದಿನವಾದ ಇಂದು ಇಂಗ್ಲೆಂಡ್ ಗೆಲುವಿಗೆ 90 ಓವರ್ಗಳಲ್ಲಿ 350ರನ್ ಅಗತ್ಯವಿದೆ. 371 ರನ್ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ಭಾರತಕ್ಕೆ ಇಂಗ್ಲೆಂಡಿನ
10 ವಿಕೆಟ್ ಉರುಳಿಸಬೇಕಾಗಿದೆ.ಎರಡನೇ ಇನಿಂಗ್ಸ್ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅಮೋಘ ಶತಕದ ನೆರವಿನಿಂದ ಇದರೊಂದಿಗೆ ಭಾರತ 364
ರನ್ ಗಳಿಸಿತು. ಮೊದಲ ಇನ್ನೀಂಗ್ಸ್ನಲ್ಲಿ 6 ರನ್ ಲೀಡ್ ಪಡೆದಿದ್ದ ಭಾರತ ಇಂಗ್ಲೀಷರಿಗೆ 371 ರನ್ ಗುರಿ ನೀಡಿತು. ಭಾರತದ ಕೊನೆಯ 6 ವಿಕೆಟ್ಗಳು ಕೇವಲ 31 ರನ್ ಅಂತರದಲ್ಲಿ ಪತನವಾಗಿರುವುದು ಬೃಹತ್ ಮೊತ್ತ ಗಳಿಸಲು ಹಿನ್ನಡೆಯಾಯಿತು. ರಾಹುಲ್ ಮತ್ತು ಪಂತ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 195 ರನ್ ಗಳಿಸಿದರು.247 ಎಸೆತಗಳನ್ನು ಎದುರಿಸಿರುವ ರಾಹುಲ್ 18 ಬೌಂಡರಿ ಸಹಿತ 1137 ರನ್ ಗಳಿಸಿದರೆ, ಪಂತ್ 140 ಎಸೆತಗಳಲ್ಲೇ 15 ಬೌಂಡರಿ ಹಾಗೂ 3 ಸಿಕ್ಸ್ ಸಹಿತ 118 ರನ್ ಬಾರಿಸಿದರು. ರವೀಂದ್ರ ಜಡೇಜ 25, ಕರುಣ್ ನಾಯರ್ 20 ರನ್ ಬಾರಿಸಿ ಔಟ್ ಆದರು.