ಸುಳ್ಯ:ಸುಳ್ಯ ಯುವಜನ ಸಂಯುಕ್ತ ಮಂಡಳಿಯಿಂದ ತಾಲೂಕು ಮಟ್ಟದಲ್ಲಿ ಕೊಡಮಾಡುವ 2023-24ನೇ ಸಾಲಿನ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿಗೆ ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲ ಹಾಗೂ ಅತ್ಯುತ್ತಮ ಯುವತಿ ಮಂಡಲ ಪ್ರಶಸ್ತಿಗೆ
ಮಯೂರಿ ಯುವತಿ ಮಂಡಲ ಚೊಕ್ಕಾಡಿ ಭಾಜನವಾಗಿದ್ದು ಸೆ.14ರಂದು ನಡೆದ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಅತ್ಯುತ್ತಮ ಯುವಕ ಮಂಡಲಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಶಾಸ್ತಾವು ಯುವಕ ಮಂಡಲ ರೆಂಜಾಳ ಮರ್ಕಂಜ, ಸಚಿನ್ ಕ್ರೀಡಾ ಸಂಘ ಹರಿಹರಪಲ್ಲತಡ್ಕ, ಹಾಗೂ ಅಜ್ಜಾವರದ ಚೈತ್ರ ಯುವತಿ ಮಂಡಲ ವಿಶೇಷ ಗಮನಾರ್ಹ ಸಾಧನೆಗೈದ ಯುವಕ- ಯುವತಿ ಮಂಡಲ ಪ್ರಶಸ್ತಿ ಪಡೆದುಕೊಂಡರು.
ಉಳಿದಂತೆ ಭಾಂದವ್ಯ ಗೆಳೆಯರ ಬಳಗ ಕಮಿಲ, ಯಶಸ್ವಿ ಯುವಕ ಮಂಡಲ ಕಲ್ಲುಗುಂಡಿ, ಸರ್ವೋದಯ ಯುವಕ ಮಂಡಲ ಕಲ್ಮಕಾರು ತಾಲೂಕಿನಲ್ಲಿ ಸಕ್ರಿಯವಾಗಿದ್ದು ವೈವಿಧ್ಯತೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆಂದು ವಿಶೇಷ ಪ್ರಶಸ್ತಿಗೆ ಭಾಜನವಾದರು.