ಲಂಡನ್: ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಟೂರ್ನಿಯ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇವಲ 138 ರನ್ ಗಳಿಸಿ ಆಲೌಟ್ ಆಗಿದೆ.ಇದರೊಂದಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಉತ್ತಮ ಮುನ್ನಡೆ ಸಾಧಿಸಿದೆ.74 ರನ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ 134ರನ್ ಆಗುವಷ್ಟರಲ್ಲೇ 8 ವಿಕೆಟ್ ಕಳೆದುಕೊಂಡಿದೆ. ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ, 212 ರನ್ಗೆ ಸರ್ವಪತನ ಕಂಡಿತ್ತು. ನಂತರ ಮೊದಲ ದಿನವೇ ಬ್ಯಾಟಿಂಗ್ ಶುರು ಮಾಡಿದ್ದ ಆಫ್ರಿಕನ್ನರು 4 ವಿಕೆಟ್ ಕಳೆದುಕೊಂಡು 43 ರನ್ ಗಳಿಸಿತ್ತು.
ನಾಯಕ ತೆಂಬಾ ಬವುಮಾ ಹಾಗೂ ಡೇವಿಡ್ ಬೆಡ್ಡಿಂಗಮ್ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ದಿನದಾಟದ ಆರಂಭದಲ್ಲಿ ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿ, ವಿಕೆಟ್ ಗಳಿಕೆಗೆ ತಡೆಯೊಡ್ಡಿತು.5ನೇ ವಿಕೆಟ್ ಪಾಲುದಾರಿಕೆಯಲ್ಲಿ 64 ರನ್ ಗಳಿಸಿದ್ದ ಈ ಜೋಡಿಯನ್ನು ಕಮಿನ್ಸ್ ಬೇರ್ಪಡಿಸಿದರು. 84 ಎಸೆತಗಳಲ್ಲಿ 36 ರನ್ ಗಳಿಸಿದ್ದ ಬವುಮಾ, ಲಾಬುಷೇನ್ಗೆ ಕ್ಯಾಚ್ ನೀಡಿದರು.ನಂತರ ಬಂದ ಕೈಲ್ ವೆರಿಯನ್ 13 ರನ್ ಗಳಿಸಿ ಔಟಾದರು. ಇದರೊಂದಿಗೆ, ಹರಿಣಗಳ ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. 45 ರನ್ ಗಳಿಸಿದ್ದ ಬೆಡ್ಡಿಂಗಮ್, ಅರ್ಧಶತಕ ಹೊಸ್ತಿಲಲ್ಲಿ ಔಟಾದರು. ಬವುಮಾ ಪಡೆಯ ಕೊನೇ ಐದು ವಿಕೆಟ್ಗಳು ಕೇವಲ 12 ರನ್ ಅಂತರದಲ್ಲಿ ಪತನಗೊಂಡವು.
ಆಸಿಸ್ ಪರ ನಾಯಕ ಕಮಿನ್ಸ್ 28 ರನ್ ನೀಡಿ ಆರು ವಿಕೆಟ್ಗಳನ್ನು ಜೇಬಿಗಿಳಿಸಿಕೊಂಡರು. ಮಿಚೇಲ್ ಸ್ಟಾರ್ಕ್ ಎರಡು ಮತ್ತು ಜೋಶ್ ಹ್ಯಾಜಲ್ವುಡ್ ಒಂದು ವಿಕೆಟ್ ಕಿತ್ತರು.ಎರಡನೇ ಇನ್ನೀಂಗ್ಸ್ನಲ್ಲಿ ಆಸೀಸ್ನ
ಆರಂಭಿಕ ಮಾರ್ನ್ ಲಾಬುಷೇನ್ 22 ರನ್ ಗಳಿಸಿದರೆ, ಉಸ್ಮಾನ್ ಖ್ವಾಜಾ ಕೇವಲ 6 ರನ್ಗೆ ಔಟಾಗಿದ್ದಾರೆ. ಸ್ಟೀವ್ ಸ್ಮಿತ್ 13 ರನ್ಗೆ ವಿಕೆಟ್ ಒಪ್ಪಿಸಿದರೆ, ಕ್ಯಾಮರೂನ್ ಗ್ರೀನ್ ಸೊನ್ನೆ ಸುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯೂ ವೆಬ್ಸ್ಟರ್ ಆಟ 9 ರನ್ಗೆ ಕೊನೆಯಾಗಿದೆ.
ಎರಡನೇ ಇನಿಂಗ್ಸ್ನಲ್ಲೂ