ಲೀಡ್ಸ್: ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅಬ್ಬರದ ಆಟದ ನೆರವಿನಿಂದ ಭಾರತ ಮಹಿಳೆಯರ ತಂಡವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ ಮಹಿಳೆಯರ ತಂಡವು 95 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.ಸ್ಮೃತಿ (74; 47ಎ, 4X11, 6X1) ಮತ್ತು ಶಫಾಲಿ (55; 38ಎ, 4X10) ಮೊದಲ
ವಿಕೆಟ್ ಜೊತೆಯಾಟದಲ್ಲಿ 115 ರನ್ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 209 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡಚ್ ಪಡೆ 17.3 ಓವರ್ಗಳಲ್ಲಿ 114 ರನ್ಗಳಿಗೆ ಹೋರಾಟ ಮುಗಿಸಿತು. ಶ್ರೀಚರಣಿ (19ಕ್ಕೆ 4), ಶಫಾಲಿ ವರ್ಮಾ (20ಕ್ಕೆ 3) ಮತ್ತು ನಂದನಿ ಶರ್ಮಾ (22ಕ್ಕೆ 2) ಅವರು ನೆದರ್ಲೆಂಡ್ಸ್ ತಂಡಕ್ಕೆ ಕಡಿವಾಣ ಹಾಕಿದರು. ಭಾರತ ತಂಡಕ್ಕೆ ಇದು ಸತತ ಎರಡನೇ ಜಯ. ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿತು. ಇದರೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.








