ಹೂಸ್ಟನ್: ಫಿಫಾ ವಿಶ್ವ ಕಪ್ನಲ್ಲಿ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ವಿರುದ್ಧ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ತಂಡ ಪಂದ್ಯವನ್ನು 1-1 ಗೋಲುಗಳ ಡ್ರಾ ಸಾಧಿಸುವ ಮೂಲಕ ಪೋರ್ಚುಗಲ್ಗೆ ಆಘಾತ ನೀಡಿದೆ. ಮೊದಲಾರ್ಧದಲ್ಲಿ
ಗೋಲು ಬಾರಿಸಿ ಮುನ್ನಡೆ ಪಡೆದ ಪೋರ್ಚುಗಲ್ಗೆ ಗೋಲು ಬಾರಿಸುವ ಮೂಲಕ ಕಾಂಗೋ ಸಮಬಲ ಸಾಧಿಸಿತು. ದ್ವಿತೀರ್ಯಾಧದಲ್ಲಿ ಭರ್ಜರಿ ಪ್ರದರ್ಶನ ನೀಡಿದರೂ ಪೋರ್ಚುಗಲ್ಗೆ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ರೊನಾಲ್ಡೊ ಎರಡು ಗೋಲು ಗಳಿಸುವ ಅವಕಾಶ ಪಡೆದರೂ, ಅದನ್ನು ಪರಿವರ್ತಿಸಲು ಸಾಧ್ಯವಾಗಲಿಲ್ಲ.
ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ಕ್ರೊಯೇಷಿಯಾ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಪರಾಭವಗೊಳಿಸಿತು. ನಾಯಕ ಹ್ಯಾರಿ ಕೇನ್ ಎರಡು ಗೋಲು ಬಾರಿಸಿದರು.












