ನವದೆಹಲಿ:ಸ್ಮೃತಿ ಮಂದಾನ ಅವರನ್ನು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ನೇಮಕ ಮಾಡಲಾಗಿದೆ. ಹರ್ಮನ್ಪ್ರೀತ್ ಕೌರ್ ಅವರು ಮಂಗಳವಾರ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದಾರೆ.ಸ್ಮೃತಿ ಮಂದಾನ ಅವರನ್ನು ಭಾರತ ತಂಡದ ನೂತನ ನಾಯಕಿಯನ್ನಾಗಿ ನೇಮಕ ಮಾಡಲಾಗಿದೆ’ ಎಂದು
ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ‘ಸ್ಮೃತಿ ಅವರು ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ದೇಶಿ ಮತ್ತು ಫ್ರ್ಯಾಂಚೈಸಿ ಕ್ರಿಕೆಟ್ನಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು 2024 ಮತ್ತು 2026 ರಲ್ಲಿ ಚಾಂಪಿಯನ್ ಆಗಿತ್ತು.







