ತರೂಬಾ: ಟಿ20 ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ನ್ಯೂಜಿಲೆಂಡ್ ವಿರುದ್ಧ 13 ರನ್ಗಳ ಗೆಲುವು ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ವಿಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 149 ರನ್ ಪೇರಿಸಿತು. ವಿಂಡೀಸ್ ಪರ ರುದರ್ಫರ್ಡ್ 68 ರನ್ಗಳಿ ಗಮನ ಸೆಳೆದರು. ನ್ಯೂಜಿಲೆಂಡ್ ಪರ ಬೌಲ್ಟ್ 3, ಸೌಥಿ, ಲೋಕಿ ತಲಾ 2 ವಿಕೆಟ್ ಪಡೆದರು.ಈ ಕಡಿಮೆ ಮೊತ್ತವನ್ನು ಬೆನ್ನತ್ತಿದ
ನ್ಯೂಜಿಲೆಂಡ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 136 ರನ್ಗಳಿಸಲಷ್ಟೇ ಸಾಧ್ಯವಾಯಿತು. ನ್ಯೂಜಿಲೆಂಡ್ ಪರ ಫಿಲಿಪ್ಸ್ 40, ಅಲೆನ್ 26 ರನ್ ಹೊಡೆದರು. ವಿಂಡೀಸ್ ಪರ ಜೋಸೆಪ್ 4 ವಿಕೆಟ್ ಪಡೆದರು. ನ್ಯೂಜಿಲೆಂಡ್ ತಂಡಕ್ಕೆ ಈ ಸೋಲಿನ ಮೂಲಕ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಹೊರಬೀಳುವ ಆತಂಕ ಎದುರಿಸುತ್ತಿದೆ. ನ್ಯೂಜಿಲೆಂಡ್ಗೆ ಆಡಲು ಇನ್ನೂ 2 ಪಂದ್ಯಗಳು ಬಾಕಿ ಉಳಿದಿವೆ. ಸಿ ಗುಂಪಿನಲ್ಲಿರುವ ನ್ಯೂಜಿಲೆಂಡ್ ಆಡಿರುವ 2 ಪಂದ್ಯಗಳನ್ನು ಸೋತಿದೆ. ವೆಸ್ಟ್ ಇಂಡೀಸ್ ಅಫ್ಗಾನಿಸ್ತಾನ, ಮೊದಲೆರಡು ಸ್ಥಾನದಲ್ಲಿದ್ದು ಯಾವುದೇ ಅಂಕ ಸಂಪಾದನೆ ಮಾಡದಿರುವ ನ್ಯೂಜಿಲೆಂಡ್ ಕೊನೆಯ ಸ್ಥಾನದಲ್ಲಿದೆ.
ಈ ಗೆಲುವಿನ ಮೂಲಕ ವೆಸ್ಟ್ ಇಂಡೀಸ್ ಸೂಪರ್ ಎಂಟರ ಘಟ್ಟ ಪ್ರವೇಶಿಸಿತು.