ಪಂಜ:ಪಂಜ ಶ್ರೀಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಇದ್ದ ಕೆಸರನ್ನು ಶ್ರಮದಾನ ಹಾಗು ಜೆಸಿಬಿ ಮೂಲಕ ಸರಿ ಮಾಡಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರು,ಕಲ್ಮಡ್ಕ ಗ್ರಾಮ ಪಂಚಾಯತ್
ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ, ಧರ್ಮಣ್ಣ ನಾಯ್ಕ ಗರಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ರಜಿತ್ ಭಟ್ ಪಂಜಬೀಡು,ಹಾಗೂ ಕೇಶವ ಕುದ್ವ, ಲೋಕನಾಥ್ ಕುದ್ವ, ಸೂರ್ಯ ಭಟ್,ಅನುರಾಜ್ ಕಕ್ಯಾನ, ತೀರ್ಥಪ್ರಸಾದ ಪಲ್ಲತಡ್ಕ ಹಾಗೂ ದೇವಳದ ಸಿಬ್ಬಂಧಿಗಳು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.