ಕಲ್ಪಟ್ಟ:ಜನರನ್ನು ವನ್ಯ ಪ್ರಾಣಿಗಳಿಂದ ರಕ್ಷಿಸಲು ಕೇರಳ ರಾಜ್ಯ ಸರಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕರೆ ನೀಡಿದ ಹರತಾಳ ಕೇರಳದ ವಯನಾಡ್ ಜಿಲ್ಲೆಯಲ್ಲಿ ಗುರುವಾರ ನಡೆಯುತಿದೆ. ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ
ಇಬ್ಬರು ಕಾಡಾನೆ ದಾಳಿಗೆ ಬಲಿಯಾದ ಘಟನೆಯ ಹಿನ್ನಲೆಯಲ್ಲಿ ಹರತಾಳ ಕರೆ ನೀಡಿದೆ.ವನ್ಯ ಪ್ರಾಣಿಗಳ ದಾಳಿಗಳಿಗೆ ಆಗಾಗ್ಗೆ ಮಾನವ ಜೀವಗಳು ಬಲಿಯಾಗುತ್ತಿದ್ದರೂ ಸರಕಾರದ ನಿಷ್ಕ್ರಿಯತೆಯ ವಿರುದ್ಧ ಹರತಾಳಕ್ಕೆ ಕರೆ ನೀಡಲಾಗಿದೆ ಎಂದು ಯುಡಿಎಫ್ ಮುಖಂಡರು ತಿಳಿಸಿದ್ದಾರೆ. ಅಗತ್ಯ ಸೇವೆಗಳು, ಜಾತ್ರೆಗಳಿಗೆ ವಿನಾಯತಿ ನೀಡಲಾಗಿದೆ. ಯುಡಿಎಫ್ ಪ್ರತಿಭಟನಾ ಸಭೆಗಳು ನಡೆಯಲಿದೆ. ಹರತಾಳ ಬೆಂಬಲಿಗರು ಕೆಲವೆಡೆ ವಾಹನಗಳಿಗೆ ತಡೆ ಒಡ್ಡಿದ್ದಾರೆ ಎಂದು ವರದಿಯಾಗಿದೆ. ಕಳೆದ ಎರಡು ದಿನಗಳಲ್ಲಿ ಮನು, ಬಾಲಕೃಷ್ಣ ಎಂಬವರು ಕಾಡಾನೆ ದಾಳಿಗೆ ಮೃತಪಟ್ಟಿದ್ದರು.