ತಿರುವನಂತಪುರ: ಕೋಟಯಂ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ಧುರೀಣ ತಿರುವಂಜೂರ್ ರಾಧಾಕೃಷ್ಣನ್ 16 ನೇ ಕೇರಳ ವಿಧಾನ ಸಭಾ ಅಧ್ಯಕ್ಷರಾಗಿ ಚುನಾಯಿತರಾದರು. 101 ಸದಸ್ಯರ ಬೆಂಬಲದಿಂದ ಅವರ ಆಯ್ಕೆ ನಡೆಯಿತು. 35 ಸದಸ್ಯರು ಎಡರಂಗದ
ಅಭ್ಯರ್ಥಿ ಎಸಿ ಮೊಯ್ದೀನ್ ಪರ ಹಾಗೂ ಮೂವರು ಎನ್ಡಿಎ ಅಭ್ಯರ್ಥಿ ಬಿಜೆಪಿಯ ಗೋಪ ಕುಮಾರ್ಗೆ ಮತ ಹಾಕಿದರು. ಒಟ್ಟು 139 ಸದಸ್ಯರು ಮತ ಚಲಾಯಿಸಿದ್ದರು.
ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ಮತ ಚಲಾಯಿಸಲಿಲ್ಲ.ಚುನಾಯಿತ ಸಭಾಧ್ಯಕ್ಷರನ್ನು ಮುಖ್ಯಮಂತ್ರಿ ವಿ. ಡಿ. ಸತೀಶನ್ ಹಾಗೂ ವಿಪಕ್ಷ ನಾಯಕ ಪಿಣರಾಯಿ ವಿಜಯನ್ ಸಭಾಧ್ಯಕ್ಷ ಸ್ಥಾನಕ್ಕೆ ಬರಮಾಡಿಕೊಂಡರು. ಸಭಾಧ್ಯಕ್ಷ ಹುದ್ದೆಗೆ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿರುವುದು ಕೇರಳ ವಿಧಾನ ಸಭಾ ಇತಿಹಾಸದಲ್ಲೇ ಇದು ಮೊದಲ ಬಾರಿಯಾಗಿದೆ.ವಿಧಾನಸಭೆಯ ಹಿರಿಯ ಸದಸ್ಯ ಹಂಗಾಮಿ ಸ್ಪೀಕರ್ ಜಿ. ಸುಧಾಕರನ್ ನೇತೃತ್ವದಲ್ಲಿ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.







