ತಿರುವನಂತಪುರ: ಕೇರಳಂ ವಿಧಾನಸಭೆಯಲ್ಲಿ ಶಾಸಕರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ.ಅಶ್ರಫ್ ಗಮನ ಸೆಳೆದಿದೆ. 16ನೇ
ಕೇರಳ ವಿಧಾನಸಭೆಯ ಅಧಿವೇಶನ ಗುರುವಾರ ಆರಂಭಗೊಂಡಿದ್ದು, ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ನಡೆಯುತ್ತಿದೆ.
ಈ ವೇಳೆ ಎ.ಕೆ.ಎಂ.ಅಶ್ರಫ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಅವರು ತಮ್ಮ ಕನ್ನಡ ಭಾಷಾ ಪ್ರೇಮವನ್ನು ಮೆರೆದರು. ಈ ಹಿಂದೆಯೂ ಅವರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ಕೇರಳ ವಿಧಾನಸಭೆಯಲ್ಲಿ ಕನ್ನಡ ಮೊಳಗಿಸಿದ್ದರು.
previous post













