ತಿರುವನಂತಪುರಂ: ಕೇರಳ ವಿಷು ಬಂಪರ್ ಟಿಕೆಟ್ ಡ್ರಾ ಇಂದು ನಡೆಯಿತು. ಮೊದಲ ಬಹುಮಾನ 12 ಕೋಟಿ ರೂ VC 490987 ನಂಬರ್ಗೆ ಲಭಿಸಿದೆ.ದ್ವಿತೀಯ ಬಹುಮಾನ 6 ಮಂದಿಗೆ
ತಲಾ ಒಂದು ಕೋಟಿ ಲಭಿಸಲಿದೆ. ತೃತೀಯ ಬಹುಮಾನ ತಲಾ 10 ಲಕ್ಷ ಹತ್ತು ಮಂದಿಗೆ, ಚತುರ್ಥ ಬಹುಮಾನ ತಲಾ 5 ಲಕ್ಷ 6 ಮಂದಿಗೆ ದೊರೆಯಲಿದೆ.
ಪ್ರಥಮ ಹಾಗೂ ದ್ವಿತೀಯ ಅದೃಷ್ಠ ಬಂದ ಲಾಟರಿ ಸಂಖ್ಯೆಗಳು
ಆಲಪ್ಪುಯ ಜಿಲ್ಲೆಯಲ್ಲಿ ಮಾರಾಟವಾದ ಟಿಕೆಟ್ಗೆ ಪ್ರಥಮ ಬಹುಮಾನ 12 ಕೋಟಿ ಲಭಿಸಿದೆ. ಈ ಬಾರಿಯ ವಿಷು ಬಂಪರ್ಗೆ 300 ರೂ ಮುಖ ಬೆಲೆಯ 42 ಲಕ್ಷ ಟಿಕೆಗಳಲ್ಲಿ ಬಹುತೇಕ ಎಲ್ಲಾ ಮಾರಾಟವಾಗಿದ್ದು 15,110 ,ಟಿಕೆಟ್ಗಳು ಮಾತ್ರ ಉಳಿದಿತ್ತು.