ಸುಳ್ಯ:ಬಿಎಂಎಸ್ ಸಂಯೋಜಿತ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕ, ಮಾಲಕರ ಸಂಘದ ವತಿಯಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮ ನ.28ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಲೋಕ ಕಲ್ಯಾಣಾರ್ಥವಾಗಿ ಹಾಗೂ ಸಂಘದ ಸರ್ವ ಸದಸ್ಯರ ಮತ್ತು
ಹಿತೈಷಿಗಳ ಶ್ರೇಯಾಭಿವೃದ್ಧಿಗಾಗಿ ನಡೆಯುವ 27 ನೇ ವರುಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ನಡೆಯಿತು. ಶ್ರೀ ಕಲ್ಕುಡ ಕಲ್ಲುರ್ಟಿ ಆಡಳಿತ ಸಮಿತಿಯ ಆಡಳಿತ ಧರ್ಮದರ್ಶಿ ಉಮೇಶ್ ಪಿ ಕೆ ಹಾಗೂ ಸಂಘದ ಹಿರಿಯ ಸದಸ್ಯರಾದ ವಿಶ್ವನಾಥ ಅಡ್ಪಂಗಾಯ ಹಾಗು ನಂಜುಂಡ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಂಘದ
ಅಧ್ಯಕ್ಷ ಪ್ರಕಾಶ್ ಎಂ.ಎಸ್, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ. ಕೋಶಾಧಿಕಾರಿ ರವಿ ಎಸ್ ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ್, ಕಲ್ಕುಡ ದೈವಸ್ಥಾನದ ಧರ್ಮದರ್ಶಿ ಭಾಸ್ಕರ್ ಐಡಿಯಲ್ ಪೂಜಾರಿಗಳಾದ ತಿಮ್ಮಪ್ಪ ನಾವೂರು, ಸಂಘದ ನಿರ್ದೇಶಕರಾದ ಭಾನು ಪ್ರಕಾಶ್, ಹರೀಶ್ ನೆಕ್ರಾಜೆ, ಶಂಕರ, ವೇಣು ಗೋಪಾಲ ಕುರುಂಜಿ ಭಾಗ್, ಜನಾರ್ದನ ಶ್ರೀ ರಾಮ್ ಪೇಟೆ, ರೋಹಿತ್ ಗಾಂಧಿನಗರ, ಸುರೇಶ್ ಕುರುಂಜಿಬಾಗ್, ಜಗದೀಶ್ ಎನ್.ಆರ್, ಚಾಮಯ್ಯ ಮಾರ್ಕೆಟ್ ರಸ್ತೆ, ಲೋಕೇಶ್ ಬಸ್ ನಿಲ್ದಾಣ ಮತ್ತಿತರರು ಉಪಸ್ಥಿತರಿದ್ದರು.









