ಸುಳ್ಯ:ಸುಳ್ಯ-ಆಲೆಟ್ಟಿ-ಬಡ್ಡಡ್ಕ- ಕೂರ್ನಡ್ಕ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ.0.80 ರಲ್ಲಿನ ಪಯಸ್ವಿನಿ ನದಿಯ ನಾಗಪಟ್ಟಣ ಸೇತುವೆಯ ದುರಸ್ಥಿ ಕೆಲಸ ಅ.26ರಿಂದ ಆರಂಭವಾಗಲಿದೆ. ಈ ಪ್ರಯುಕ್ತ
ಅಕ್ಟೋಬರ್ 19ರಿಂದ ನವೆಂಬರ್ 30 ರವರೆಗೆ ಆಲೆಟ್ಟಿ-ಬಡ್ಡಡ್ಕ- ಕೂರ್ನಡ್ಕ ಮತ್ತು ಆಲೆಟ್ಟಿ-ಕೊಲ್ಚಾರು- ಕಣಕ್ಕೂರು-ಬಂದ್ಯಡ್ಕ ಹಾಗೂ ಕೇರಳ ಭಾಗಕ್ಕೆ ಸಂಚರಿಸುವ ವಾಹನಗಳು ಜಿಲ್ಲಾ ಮುಖ್ಯ ರಸ್ತೆಯಾದ ಸುಳ್ಯ-ಕಾಂತಮಂಗಲ- ಅಜ್ಜಾವರ-ಮಂಡೆಕೋಲು-ಕನ್ಯಾನ ಮಾರ್ಗವಾಗಿ ಮತ್ತು ನಾರ್ಕೋಡು-ಅಜ್ಜಾವರ ಗ್ರಾಮೀಣ ರಸ್ತೆ ಮೂಲಕ ಸಂಚರಿಸುವಂತೆ ಹಾಗೂ ಆ ಭಾಗಗಳಿಂದ ಸುಳ್ಯಕ್ಕೆ ಬರುವ ವಾಹನಗಳು ಸಹ ಇದೇ ಮಾರ್ಗವಾಗಿ ಸಂಚರಿಸುವಂತೆ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ. ಸೇತುವೆಯ
ದುರಸ್ತಿ ಕಾರ್ಯ ಅ.26ರಿಂದ ಆರಂಭವಾಗಲಿದ್ದು ಒಂದು ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಸಂಚಾರ ಸೇತುವೆ ದುರಸ್ತಿಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.








