ಸುಳ್ಯ:ಸುಳ್ಯದಲ್ಲಿ ವಾಸ್ಕೋಡಗಾಮ…! ಹೀಗೊಂದು ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದೆ..,ಸುಳ್ಯದಲ್ಲಿ ಅಲ್ಲಲ್ಲಿ ಬೃಹತ್ ಪ್ಲೆಕ್ಸ್ಗಳು ಕಂಡು ಬರುತಿದೆ. ಅರೆ ಏನಿದು ವಿಷ್ಯ..? ಎಂದು ತಲೆ ಕೆಡಿಸಿಕೊಳ್ಳಬೇಡಿ.. ಅಲ್ಲಿ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ತಂತ್ರಜ್ಞಾನದ ಮಾಯಾ ಲೋಕವೊಂದು ತೆರೆದುಕೊಳ್ಳುತ್ತದೆ.. ಹೌದು ಇದು ಹೊಸ ತಂತ್ರಜ್ಞಾನ. ಹೊಸ ಮಾರ್ಕೇಂಟಿಂಗ್ ತಂತ್ರ… ! ಜಾಹಿರಾತು ಮತ್ತು
ಮಾರ್ಕೇಂಟಿಂಗ್ ಎಂಬುದು ಅಗಾದ ಸಾಧ್ಯತೆಗಳ ಆಗರ.. ಈಗಿನ ಎಐ ತಂತ್ರಜ್ಞಾನ ಬಂದ ಮೇಲಂತೂ ಆ ಸಾಧ್ಯತೆಗಳಿಗೆ ಅನಂತವೇ ಸೀಮೆ.ಅದೇ ಮೇಲೆ ಹೇಳಿದ ವಾಸ್ಕೋಡಗಾಮ ಸುಳ್ಯಕ್ಕೆ ಆಗಮಿಸಿದ ಕಥೆ…! ಸುಳ್ಯದ ಪ್ರತಿಷ್ಠಿತ ಮೊಬೈಲ್ ಶೋರೂಮ್ ‘ಮೊಬೈಲ್ ಗ್ಯಾರೇಜ್’ ತಮ್ಮ ಈ ಬಾರಿಯ ಮಾನ್ಸೂನ್ ಆಫರ್ನ ಜಾಹಿರಾತಿಗೆ ಅದ್ಭುತ ಕಂಟೆಂಟ್ ಒಂದು ತಯಾರಿಸಿದ್ದು ಜಾಹಿರಾತು ಲೋಕವನ್ನು ಹುಬ್ಬೇರಿಸುವಂತೆ ಮಾಡಿದೆ. ಹೊಸ ಜಾಹಿರಾತು ಬಾರೀ ಗಮನ ಸೆಳೆದಿದ್ದು
ಟ್ರೆಂಡಿಂಗ್ ಆಗಿದೆ. ವಾಸ್ಕೋಡಗಾಮನೇ ತಮ್ಮ ಸಂಸ್ಥೆಗೆ ಆಗಮಿಸಿ ಮೊಬೈಲ್ ಖರೀದಿಸುವುದನ್ನು ಎಐ ತಂತ್ರಜ್ಞಾನದ ಮೂಲಕ ಮನಮೋಹಕವಾಗಿ ಆವಿಷ್ಕಾರ ಮಾಡಲಾಗಿದೆ.ಇತಿಹಾಸ ಮರುಕಳಿಸಿದೆ ಶತಮಾನಗಳ ಹಿಂದೆ ಕ್ಯಾಲಿಕಟ್ನ ಕರಾವಳಿ ತೀರಕ್ಕೆ ಬಂದಿಳಿದ ಆ ನಾವಿಕ..ವಾಸ್ಕೋಡಗಾಮ..
ಇದೀಗ ಮತ್ತೆ ನಮ್ಮ ಕರಾವಳಿಯತ್ತ..ಬಂದು
ಮೊಬೈಲ್ ಗ್ಯಾರೇಜ್ಗೆ ಬರುವುದನ್ನು ಸಿನಿಮಾ ಮಾದರಿಯಲ್ಲಿ ಪ್ರಸ್ತುತ

ಪಡಿಸಲಾಗಿದೆ. ಬಿಸಿನೆಸ್ನಲ್ಲಿ ಹೊಸ ಆಶಯ, ಮಾರ್ಕೆಂಟಿಂಗ್ನಲ್ಲಿ ಹೊಸ ಆವಿಷ್ಕಾರ ಮೂಲಕ ಛಾಪು ಮೂಡಿಸಿರುವ ಮೊಬೈಲ್ ಗ್ಯಾರೇಜ್ನ ಈ ಬಾರಿಯ ಜಾಹಿರಾತು ಮಾತ್ರ ಎಲ್ಲರನ್ನು ಕಣ್ಣರಳಸಿ.. ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ..!
ಹೇಗೆ ವೈರಲ್ ಆಯಿತು..?
ಸುಮಾರು 10 ದಿನಗಳಿಂದ ಸುಳ್ಯ ನಗರದಲ್ಲಿ
ವಾಸ್ಕೋಡಗಾಮಾ ಕುತೂಹಲದ ಕೇಂದ್ರ ಬಿಂದುವಾಗಿತ್ತು. ಸುಳ್ಯದ ‘ಮೊಬೈಲ್ ಗ್ಯಾರೇಜ್’ ಎಲೆಕ್ಟ್ರಾನಿಕ್ಸ್ ಮಳಿಗೆಯು ನಡೆಸಿದ ಅತ್ಯಂತ ಯಶಸ್ವಿ ಟೀಸರ್ ಮಾರ್ಕೆಟಿಂಗ್ ಅಭಿಯಾನದ ಭಾಗವಾದ ಈ ಪ್ಲೆಕ್ಸ್ ಮತ್ತು ವೀಡಿಯೋ ಬಾರೀ ಪ್ರಚಾರ ಪಡೆಯಿತು. ಈ ಟ್ರೆಂಡ್ ಹಿಂದಿರುವ ರಹಸ್ಯಪ್ರಚಾರದ ಬೋರ್ಡ್ಗಳು, ಮೊಬೈಲ್ ಗ್ಯಾರೇಜ್ ಮಳಿಗೆಯು ಸುಳ್ಯದ ವಿವಿಧ ಭಾಗಗಳಲ್ಲಿ ಪ್ರಚಾರದ ಬೋರ್ಡ್ಗಳು ಮತ್ತು ಕ್ಯೂಆರ್ (QR) ಕೋಡ್ಗಳನ್ನು ಅಳವಡಿಸಿತ್ತು. ಆ ಬೋರ್ಡ್ಗಳಲ್ಲಿ ಪ್ರಸಿದ್ಧ ಪೋರ್ಚುಗೀಸ್ ಪರಿಶೋಧಕ ವಾಸ್ಕೋಡಗಾಮಾ ಸುಳ್ಯಕ್ಕೆ ಬಂದಿದ್ದಾನೆ
ಎಂದು ಬರೆಯಲಾಗಿತ್ತು.ಈ ಬೋರ್ಡ್ಗಳನ್ನು ನೋಡಿ ಸ್ಥಳೀಯ ನಿವಾಸಿಗಳು ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ತೀವ್ರ ಕುತೂಹಲಕ್ಕೊಳಗಾದರು. ಸಮುದ್ರವೇ ಇಲ್ಲದ ಸುಳ್ಯದಲ್ಲಿ ‘ವಾಸ್ಕೋಡಗಾಮಾ’ ಯಾಕೆ ಟ್ರೆಂಡ್ ಆಗುತ್ತಿದ್ದಾನೆ ಎಂದು ಹುಡುಕುತ್ತಾ ಅನೇಕರು ಮಿನಿ-ವ್ಲಾಗ್ಗಳು ಮತ್ತು ಇನ್ಸ್ಟಾಗ್ರಾಮ್ ರೀಲ್ಸ್ಗಳನ್ನು ಮಾಡಲು ಪ್ರಾರಂಭಿಸಿದರು. ಜನರು ಈ ಬೋರ್ಡ್ಗಳನ್ನು ಹುಡುಕುತ್ತಾ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಡಿದ ವಿಡಿಯೋಗಳು ಇನ್ಸ್ಟಾಗ್ರಾಮ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದವು.
ಇದೆಲ್ಲವೂ ಒಂದು ಪ್ರಚಾರದ ಶಾಪಿಂಗ್ ಈವೆಂಟ್ಗಾಗಿ ಗ್ರಾಹಕರಲ್ಲಿ ಕುತೂಹಲ ಮೂಡಿಸಲು ಮಾಡಿದ ಸೃಜನಶೀಲ ಸ್ಟಂಟ್ ಆಗಿತ್ತು. ಕೊನೆಯಲ್ಲಿ, ವಾಸ್ಕೋಡಗಾಮಾ ದಾರಿ ಹುಡುಕುತ್ತಾ ಮೊಬೈಲ್ ಗ್ಯಾರೇಜ್ ಸುಳ್ಯದ ಇನ್ಸ್ಟಾಗ್ರಾಮ್ ಪೇಜ್ಗೆ ತಲುಪಿದ್ದಾನೆ ಎಂದು ಘೋಷಿಸಲಾಯಿತು…!
ಅದಿರಲಿ.. ಕ್ಯೂಆರ್ ಕೋಡ್
ನೀವೂ ಒಮ್ಮೆ ಸ್ಕ್ಯಾನ್ ಮಾಡಿ ನೋಡಿ..!








































