ಸುಳ್ಯ:ಸುಳ್ಯ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಅನುಕೂಲಕ್ಕಾಗಿ ನ. 22 ಭಾನುವಾರ ಸುಳ್ಯದ ಕುರುಂಜಿಬಾಗ್ನಲ್ಲಿರುವ ಸಂಧ್ಯಾ ರಶ್ಮಿ ಸಭಾಭವನದಲ್ಲಿ ‘ಆಧಾರ್ ನೋಂದಾವಣೆ ಮತ್ತು ತಿದ್ದುಪಡಿ ಶಿಬಿರ’ ನಡೆಯಲಿದೆ. ಲೋಕೇಶ್ ಪೀರನಮನೆ ರವರ ಆಯೋಜಕತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದೊಂದಿಗೆ
ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಹೊಸ ಆಧಾರ್ ನೋಂದಾವಣೆ ಹಾಗೂ ಈಗಾಗಲೇ ಹೊಂದಿರುವ ಆಧಾರ್ ಕಾರ್ಡ್ನಲ್ಲಿನ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಅವಕಾಶವಿದೆ. ಶಿಬಿರದಲ್ಲಿ ಸೇವೆ ಪಡೆಯಲು ಇಚ್ಚಿಸುವವರು ಮುಂಚಿತವಾಗಿ ಕೂಪನ್ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಮುಂಚಿತವಾಗಿ ಕೂಪನ್ ಪಡೆದುಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಬಿರದ ಆಯೋಜಕರಾದ ಲೋಕೇಶ್ ಪೀರನಮನೆ ರವರ ಮೊಬೈಲ್ ಸಂಖ್ಯೆ 814 7870 814 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
















