ಅಲೆಕ್ಕಾಡಿ:ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನದ ಆಶ್ರಯದಲ್ಲಿ ಭಾರತ್ ಆಟೋಕಾರ್ಸ್ ಮಂಗಳೂರು ಇದರ ಸಹಯೋಗದಲ್ಲಿ ದೀಪಾವಳಿಯ ಗೋಪೂಜಾ ಕಾರ್ಯಕ್ರಮ ನಾಳೆ(ನ.22) ಸಂಜೆ 4 ಗಂಟೆಯಿಂದ ಮುರುಳ್ಯ ಗ್ರಾಮದ ನೀರುಡೇಲು ಎಂಬಲ್ಲಿ ನಡೆಯಲಿದೆ.ಕಿನ್ನಿಗೋಳಿಯ
ಶ್ರೀ ಶಕ್ತಿದರ್ಶನ ಯೋಗಾಶ್ರಮದ ಯೋಗಾಚಾರ್ಯರಾದ ಶ್ರೀ ದೇವಬಾಬಾಜಿ ಆಶೀರ್ವಚನ ನೀಡುವರು. ಮಂಗಳೂರು ಜನತಾ ಬಜಾರ್ ಅಧ್ಯಕ್ಷ ಕೆ.ಪ್ರಸನ್ನ ಭಟ್ ಗುಂಡಿಮಜಲು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಜೆ.ಎಸ್.ಗಟ್ಟಿ, ಬೆಂಗಳೂರಿನ ಫೌಂಡೇಶನ್ ಫಾರ್ ಕ್ವಾಲಿಟಿ ಇಂಡಿಯಾದ ನಿರ್ದೇಶಕರು ಮತ್ತು ಸಿಇಒ ಹಾಗು ವಿಶ್ರಾಂತ ಪ್ರಾಧ್ಯಾಪಕರಾದ ಡಾ.ತುಪ್ಪಿಲ್ ವೆಂಕಟೇಶ್,ಮಂಗಳೂರಿನ ವೇದಮಾರೋಗ್ಯ ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಸಚಿನ್ ನಡ್ಕ, ಮೈಸೂರಿನ ಬ್ಯಾಂಕ್ ಕಾಲೋನಿ ಗೃಹಿಣಿ ಸಮಾಜದ

ಅಧ್ಯಕ್ಷೆ ಕೆ.ಸಿ.ಮಂಜುಳ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಉಜಿರೆ ಇಲ್ಲಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಹಾಗು ದೈವ ನರ್ತಕರಾದ ಡಾ.ರವೀಶ್ ಪಡುಮಲೆ, ಹಾಸನ ಅರಸೀಕೆರೆ ತಾಲೂಕು ಕಾರಾಗ್ರಹದ ಅಧೀಕ್ಷಕರಾದ ಎಂ.ಎನ್.ಸದಾಶಿವಯ್ಯ, ಮಂಡ್ಯ ರೈತ ಶಾಲೆಯ ಸಂಸ್ಥಾಪಕ ಸತ್ಯಮೂರ್ತಿ, ಬೆಂಗಳೂರು ಎಂ.ಎನ್.ರಾಮಯ್ಯ ತಾಂತ್ರಿಕ ವಿದ್ಯಾಲಯದ ನಿವೃತ್ತ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಹಾಗು ಕೃಷಿ ಆಶ್ರಮ ರುವಾರಿಗಳಾದ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರ, ಪತ್ರಕರ್ತ ಡಾ.ನಾಗೇಶ್ ರಾಗಿಮುದ್ದೇನಹಳ್ಳಿ ಮತ್ತಿತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗೋಕಾಳಜಿ ಮತ್ತು ಸಂರಕ್ಷಣೆಯ ಸಾಧಕರಾದ ತಿರುಮಲೇಶ್ವರ, ಸವಿತಾ ಕುಡುಂಬಿಲ ಮನೆ ಕುಕ್ಕುಜಡ್ಕ ಇವರನ್ನು ಗುರುತಿಸಿ ಗೌರವಿಸಲಾಗುವುದು.
ಈ ಸಂದರ್ಭದಲ್ಲಿ ಗವ್ಯೋತ್ಪನ್ನ ಪ್ರದರ್ಶನ ಹಾಗೂ ಮಾರಾಟ ಇರಲಿದೆ ಎಂದು ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆ ಮತ್ತು ಸಂವರ್ಧನಾ ತಂಡದ ಸಂಚಾಲಕರು ಹಾಗು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಕ್ಷಯ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















