ಸುಳ್ಯ: ಸಮಾಜ ಸೇವೆ ರೋಟರಿ ಸಂಸ್ಥೆಯ ಮೂಲ ಧ್ಯೇಯ. ಅದನ್ನು ಇನ್ನಷ್ಟು ವಿಸ್ತರಿಸಲು ರೋಟರಿ ಗ್ರಾಮೀಣ ದಳಗಳು ಅಗತ್ಯ. ಇನ್ನಷ್ಟು ಗ್ರಾಮಿಣ ದಳ ವಿಸ್ತರಿಸಲು ಸಂಸ್ಥೆ ಮುಂದಾಗಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಸತೀಶ್ ಬೋಳಾರ್ ಹೇಳಿದರು.ಅವರು ಭಾನುವಾರ ಇಲ್ಲಿನ ರೋಟರಿ ಸಮುದಾಯ ಸಭಾಂಗಣದಲ್ಲಿ ನಡೆದ ರೋಟರಿ
ಸಮುದಾಯ ದಳಗಳ ಜಿಲ್ಲಾ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.ರೋಟರಿ ಜಿಲ್ಲೆ, ಸುಳ್ಯ ರೋಟರಿ ಕ್ಲಬ್, ಅರಂಬೂರು ರೋಟರಿ ಸಮುದಾಯ ದಳ ಕಾರ್ಯಕ್ರಮ ಆಯೋಜಿಸಿತ್ತು.ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ರೋಟರಿ ಗ್ರಾಮೀಣ ದಳಗಳ ಜಿಲ್ಲಾ ಸಂಚಾಲಕ ಕೆ.ಪ್ರಕಾಶ್, ಸಹಾಯಕ ರಾಜ್ಯಪಾಲ ಆನಂದ ಖಂಡಿಗ, ರೋಟರಿ ವಲಯ ಸೇನಾನಿ ಗಿರೀಶ್ ನಾಕೊ೯ಡು, ಜಿಲ್ಲಾ ರೋಟರಿ ಗ್ರಾಮೀಣ ದಳ ಪ್ರತಿನಿಧಿ ಆನಂದ ಮಲಯಾಳಂ ಕೋಡಿ ಭಾಗವಹಿಸಿದರು.
ಸಮಾವೇಶ ಸಂಚಾಲಕ ಡಾ. ರಾಮಮೋಹನ ಸ್ವಾಗತಿಸಿದರು.ರೋಟರಿ ಕಾರ್ಯದರ್ಶಿ ಹರಿರಾಯ ಕಾಮತ್ ವಂದಿಸಿದರು. ಚಂದ್ರಶೇಖರ ಪೇರಾಲು ನಿರೂಪಿಸಿದರು.
ಗೋಷ್ಠಿಗಳು:
ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಿದ್ದರು.ರೋಟರಿ ಜಿಲ್ಲೆ ಪೂರ್ವ ರಾಜ್ಯಪಾಲ ಡಾ. ಭಾಸ್ಕರ್, ವೆಂಕಟಾಚಲ ಡಿ. ರಾಮಕೃಷ್ಣ ಮಲ್ಲಾರ, ಡಾ.ಕೇಶವ ಪಿ.ಕೆ ಸಮುದಾಯ ದಳಗಳ ಸೇವೆ, ಅವಕಾಶಗಳ ಬಗ್ಗೆ ಗೋಷ್ಠಿಗಳನ್ನು ನಡೆಸಿಕೊಟ್ಟರು. ಸುಳ್ಯ ರೋಟರಿ ಪೂವಾ೯ಧ್ಯಕ್ಷ ಪಿ.ರಾಮಚಂದ್ರ, ಡಾ. ಕೆ.ಜಿ.ಪುರುಷೋತ್ತಮ, ನಳಿನಿ ಕಿಲಾ೯ಯ ವೇದಿಕೆಯಲ್ಲಿದ್ದರು. ಡಾ.ಹಷಿ೯ತಾ ಪುರುಷೋತ್ತಮ ಗೋಷ್ಠಿ ನಿರೂಪಿಸಿದರು.








































