ಸುಳ್ಯ:ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮಾಜಕ್ಕೆ ಕೊಡುಗೆ ನೀಡಿದ ಸುಳ್ಯದ ದೊಡ್ಡ ಶಕ್ತಿಯಾಗಿದ್ದರು ಅಗಲಿದ
ಹಿರಿಯ ಉದ್ಯಮಿ ಉಪೇಂದ್ರ ಕಾಮತ್ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ವಿನೋಬ ನಗರದ ಉಪೇಂದ್ರ ಕಾಮತ್ ಅವರ ಮನೆಯಲ್ಲಿ ನಡೆದ
ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.ಅವರು ಸಂಘದ ಶಕ್ತಿಯಾಗಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಪ್ರಮುಖರಾದ
ಚಂದ್ರಶೇಖರ ತಳೂರು, ಜನಾರ್ಧನ ಭಟ್
ನ.ಸೀತಾರಾಮ ನುಡಿನಮನ ಸಲ್ಲಿಸಿದರು.

ಪ್ರಮುಖರಾದ ಕೃಷ್ಸ ಕಾಮತ್, ಎಂ.ಬಿ.ಸದಾಶಿವ, ಎ.ವಿ.ತೀರ್ಥರಾಮ, ಎನ್.ಜಯಪ್ರಕಾಶ್ ರೈ, ವೆಂಕಟ್ ವಳಲಂಬೆ, ಶೋಭಾ ಚಿದಾನಂದ, ಎಂ. ಮೀನಾಕ್ಷಿ ಗೌಡ ಅಕ್ಷಯ್ ಕೆ.ಸಿ, ವೆಂಕಟ್ ದಂಬೆಕೋಡಿ, ಮೋಹನ್ ರಾಮ್ ಸುಳ್ಳಿ, ದೇರಣ್ಣ ಗೌಡ ಅಡ್ಡಂತಡ್ಕ, ಡಾ.ಕೇಶವ ಪಿ.ಕೆ. ಚಂದ್ರಶೇಖರ ಪೇರಾಲು, ಗುರುದತ್ ನಾಯಕ್, ಡಾ.ದಾಮೋದರ ಗೌಡ, ಡಾ.ನಿತಿನ್ ಪ್ರಭು, ಶುಭಾಶ್ಚಂದ್ರ ಕಳಂಜ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.