ಮಂಗಳೂರು:ಹಿರಿಯ ಉದ್ಯಮಿ, ಸಮಾಜಸೇವಕ, ಪರಿವಾರದ ಚಟುವಟಿಕೆಗಳಿಗೆ ಸದಾ ಬೆನ್ನೆಲುಬಾಗಿ ನಿಂತ ಸರಳ ಸಜ್ಜನ ವ್ಯಕ್ತಿತ್ವದ ಶ್ರೀಯುತ ಉಪೇಂದ್ರ ಕಾಮತ್ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುವುದಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ, ಲೋಕಸಭಾ ಕ್ಷೇತ್ರದ
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಜನಸಂಘದ ಕಾಲದಿಂದ ಹಿಂದೂ ಸಮಾಜದ ಅಭ್ಯುದಯಕ್ಕಾಗಿ ದುಡಿದು ತುರ್ತುಪರಿಸ್ಥಿತಿ, ರಾಮಜನ್ಮಭೂಮಿ ಹೋರಾಟ ಹೀಗೆ ಹಲವಾರು ಹೋರಾಟದಲ್ಲಿ ಭಾಗವಹಿಸಿದ್ದ ಉಪೇಂದ್ರ ಕಾಮತರು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಭಾಗವಹಿಸಿ ನನ್ನನ್ನು ಆಶೀರ್ವದಿಸಿರುವುದನ್ನು ಶ್ರದ್ದೆಯಿಂದ ಸ್ಮರಿಸುತ್ತೇನೆ ಎಂದು ಅವರು ಹೇಳಿದ್ದಾರೆ.