ಅರಂತೋಡು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಂತೋಡು ಎಲ್ಪಕಜೆ ಬಳಿ ಮರ ಬಿದ್ದು ರಸ್ತೆ ತಡೆ ಉಂಟಾದ ಘಟನೆ ನಡೆದಿದೆ. ಇದರಿಂದ ಎರಡು ಗಂಟೆಗೂ ಹೆಚ್ಚು ಸಮಯ ಸಂಚಾರಕ್ಕೆ ತಡೆ

ಉಂಟಾಗಿತ್ತು.ಬೆಳಗ್ಗಿನ ಜಾವ ಮೂರು ಗಂಟೆಯ ವೇಳೆಗೆ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ರಸ್ತೆ ಉದ್ದಕ್ಕೂ ಎರಡು ಬದಿಯಲ್ಲಿ ವಾಹನಗಳ ಸಾಲು ಕಂಡು ಬಂದಿತ್ತು. ಕ್ರೈನ್ ತರಿಸಿ ಮರವನ್ನು ತೆರೆವುಗೊಳಿಸಲಾಯಿತು. ವಿನಯ್ ಎಲ್ಪಕಜೆ , ಸೋಮಶೇಖರ ಪೈಕ, ಶಿವಪ್ರಸಾದ್ ಎಲ್ಪಕಜೆ, ದೀಪಕ್ ಪೈಕ ,ತಾಜುದ್ದೀನ್ ಅರಂತೋಡು ಹಾಗೂ ವಾಹನ ಚಾಲಕರು, ಪ್ರಯಾಣಿಕರು ಮರ ತೆರವು ಕಾರ್ಯಾಚರಣೆಯಲ್ಲಿ ಸಹಕರಿಸಿದರು.