ಸುಳ್ಯ; ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ತಂಬಾಕು ನಿಷೇಧ ದಿನವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ನೂಲ ವ್ಯಕ್ತಿಯಾಗಿ ಫೊರೆನ್ಸಿಕ್ ಮೆಡಿಸಿನ್ ಕೆ.ವಿ.ಜಿ. ಆಯುರ್ವೇವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ಪ್ರಾಧ್ಯಾಪಕರಾದ ಡಾ.ಅವಿನಾಶ್ ಕೆ.ವಿ. ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತಾನಾಡಿ ತಂಬಾಕು ಮತ್ತು ಧೂಮಪಾನದ ದುಷ್ಪರಿಣಾಮಗಳನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಉದಯಕೃಷ್ಣ. ಬಿ, ಕಾನೂನು ನೆರವು ಸಮಿತಿಯ ಸಂಯೋಜಕಿ ನಯನಾ. ಪಿ.ಯು, ಎನ್.ಎನ್.ಎಸ್ ಘಟಕದ ಸಂಯೋಜನಾಧಿಕಾರಿ ಕಲಾವತಿ. ಎಮ್ ಹಾಗೂ ಕಾಲೇಜಿನ ಬೋದಕ, ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಂಜಲಿ, ಕವನ ಹಾಗೂ ಲಾವಣ್ಯ ಪ್ರಾರ್ಥಿಸಿ, ವಿದ್ಯಾರ್ಥಿನಿ ಆಗ್ನಾ ಕಾರ್ಯಕ್ರಮ ನಿರೂಪಿಸಿದರು. ಅಕ್ಷರ ಬಾಬು ಸ್ವಾಗತಿಸಿ, ಶೃತಿ ರಾಧಕೃಷ್ಣನ್ ವಂದಿಸಿದರು.