ಗೂನಡ್ಕ:ಗೂನಡ್ಕದ ತೆಕ್ಕಿಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ 2023-24 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 100 ಪಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ ಎಲ್ಲಾ
ಜುನೈಹ ತೆಕ್ಕಿಲ್ ಪೇರಡ್ಕ
ಮಿಶ್ರಿಯಾ
5 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಪಲಿತಾಂಶ ದಾಖಲಾಗಿರುತ್ತದೆ. ಜುನೈಹ ತೆಕ್ಕಿಲ್ ಪೇರಡ್ಕ 554 ಅಂಕ ಹಾಗೂ ಮಿಶ್ರಿಯಾ 550 ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದಿದ್ದರೆ, ಆಯಿಷಾ 481, ಆಯಿಷತ್ ಬಿಷರಾ ಎಂ.ಯು 448 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್, ಟ್ರಸ್ಟ್ ನ ಕಾರ್ಯದರ್ಶಿ ಅಶ್ರಫ್ ಗುಂಡಿ ಅಭಿನಂಧಿಸಿರುತ್ತಾರೆ.