ಸುಳ್ಯ:ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಪಾಲ್ತಾಡಿ ರಾಮಕೃಷ್ಣ ಆಚಾರರು ಮಾಡಿದರು ಎಂದು ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ಹೇಳಿದ್ದಾರೆ. ಸುಳ್ಯ ತಾಲೂಕು ಜಾನಪದ ಕೂಡುಕಟ್ಟು ವತಿಯಿಂದ ಅಗಲಿದ ವಿದ್ವಾಂಸ, ಸಂಶೋಧಕ, ಸಾಹಿತಿ, ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ
ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಜಾನಪದ ಸಂಶೋಧಕ ಡಾ.ಸುಂದರ್ ಕೇನಾಜೆ ಮಾತನಾಡಿ ಅಕಾಡೆಮಿಗಳು ಹೇಗೆ ಕೆಲಸ ಮಾಡಬೇಕು ಎಂಬುದನ್ನು ರಾಜ್ಯಕ್ಕೆ ಮಾದರಿಯಾಗಿ ತೋರಿಸಿಕೊಟ್ಟವರು ಪಾಲ್ತಾಡಿಯವರು. ಜಾನಪದ ಉತ್ಸವಗಳನ್ನು ಸಂಘಟಿಸಿ ತಳ ಸಮುದಾಯದ ಜನರಿಗೆ ಅವಕಾಶವನ್ನು ಮಾಡಿ ಕೊಟ್ಟಿದ್ದರು. ಆ ಮೂಲಕ ಸಮಾಜವನ್ನು ಬೌದ್ದಿಕವಾಗಿ ಸಾಂಸ್ಕೃತಿಕವಾಗಿ ಬೆಳೆಸಲು ಪಾಲ್ತಾಡಿಯವರು ಪ್ರಯತ್ನ ನಡೆಸಿದ್ದರು. ತುಳು ಭಾಷೆ ಮತ್ತು ಸಂಸ್ಕೃತಿಯಲ್ಲಿ ಗಟ್ಟಿತನವನ್ನು ತಂದು ಕೊಟ್ಟಿದ್ದರು. ನಮ್ಮ ಸ್ವಾಸ್ಥ್ಯವನ್ನು ಉಳಿಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಗೂನಡ್ಕ ದ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ನಿವೃತ್ತ ಪ್ರಾಂಶುಪಾಲರಾದ ಡಾ.ರೇವತಿ ನಂದನ್, ಸುರೇಶ್ ಕಣೆಮರಡ್ಕ, ಡಾ.ರಂಗಯ್ಯ, ಅನಂತ ಕೃಷ್ಣ ಚಾಕೋಟೆ, ಪತ್ರಕರ್ತರಾದ ಜಯಪ್ರಕಾಶ್ ಕುಕ್ಕೆಟ್ಟಿ, ದುರ್ಗಾಕುಮಾರ್ ನಾಯರ್ಕೆರೆ, ಗಂಗಾಧರ ಕಲ್ಲಪಳ್ಳಿ, ಗಿರೀಶ್ ಅಡ್ಪಂಗಾಯ, ಪದ್ಮನಾಭ ಮುಂಡೋಕಜೆ, ದಯಾನಂದ ಕಲ್ನಾರ್, ಶರೀಫ್ ಜಟ್ಟಿಪಳ್ಳ ನುಡಿನಮನ ಸಲ್ಲಿಸಿದರು.