ದುಬೈ: ಮಹಿಳಾ ಕ್ರಿಕೆಟ್ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭಗೊಂಡಿತು.ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ ಬಾಂಗ್ಲಾದೇಶ 16 ರನ್ಗಳ ಜಯ ಸಾಧಿಸಿತು. ಟಾಸ್ ಗೆದ್ದ ಬಾಂಗ್ಲಾ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 119 ರನ್ ಗಳಿಸಿತು.
ಸ್ಕಾಟ್ಲೆಂಡ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 103 ರನ್ ಗಳಿಸಿ ಪರಾಭವಗೊಂಡಿತು.ನ್ಯೂಝಿಲ್ಯಾಂಡ್ ವಿರುದ್ಧ ಎ ಗುಂಪಿನ ತನ್ನ ಮೊದಲ
ಪಂದ್ಯದಲ್ಲಿ ನಿರ್ಣಾಯಕ ಪಂದ್ಯವನ್ನಾಡುವ ಮೂಲಕ ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ಮಹಿಳೆಯರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ತನ್ನ ಅಭಿಯಾನವನ್ನು ಆರಂಭಿಸಲಿದೆ. ದುಬೈ ಅಂತರ್ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದೆ.
ಭಾರತ ತಂಡವು ಎ ಗುಂಪಿನಲ್ಲಿದ್ದು, ಆಸ್ಟ್ರೇಲಿಯ, ಶ್ರೀಲಂಕಾ, ನ್ಯೂಝಿಲ್ಯಾಂಡ್ ಹಾಗೂ ಪಾಕಿಸ್ತಾನ ತಂಡಗಳಿಂದ ಸವಾಲು ಎದುರಿಸಲಿದೆ. ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ ಶುಕ್ರವಾರ ಮೊದಲ ಪಂದ್ಯವನ್ನು ಆಡಿದ ನಂತರ ಪಾಕಿಸ್ತಾನ(ಅ.6) ಹಾಗೂ ಶ್ರೀಲಂಕಾ(ಅ.9) ತಂಡಗಳ ವಿರುದ್ಧ ದುಬೈನಲ್ಲಿ ಆಡಲಿದೆ. ಬಹುನಿರೀಕ್ಷಿತ ಆಸ್ಟ್ರೇಲಿಯದ ವಿರುದ್ಧ ಪಂದ್ಯವನ್ನು ಅ.13ರಂದು ಶಾರ್ಜಾದಲ್ಲಿ ಆಡಲಿದೆ.ಪ್ರತಿ ಗುಂಪಿನಿಂದ ಕೇವಲ ಎರಡು ತಂಡಗಳು ಸೆಮಿ ಫೈನಲ್ಗೆ ತಲುಪುವ ಕಾರಣ ಆಸ್ಟ್ರೇಲಿಯ ಒಂದು ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಸ್ಪರ್ಧೆಯಲ್ಲಿರಬೇಕಾದರೆ ಭಾರತವು ಎಲ್ಲಿಯೂ ಎಡವದಂತೆ ಎಚ್ಚರಿಕೆವಹಿಸಬೇಕಾಗಿದೆ.
ಪಂದ್ಯ ಆರಂಭದ ಸಮಯ: ರಾತ್ರಿ 7:30