ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾ ದೇವಿಯ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ನಾಳೆ (ಅ.11)ಯಿಂದ 20ರ ತನಕ ನಡೆಯಲಿದೆ. ಪ್ರತಿ ದಿನ ರಾತ್ರಿ 8ಕ್ಕೆ ಪೂಜೆ ನಡೆಯಲಿದೆ.ಸಂಜೆ 6ರಿಂದ 8.30ರ ತನಕ ಭಜನಾ ಸಂಕೀರ್ತನೆ, ಕಲಾ ಸೇವೆ ನಡೆಯಲಿದೆ. ಮೊದಲ ದಿನ ಅ.11ರಂದು
ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥ ಇವರಿಂದ ಭಜನಾ ಸಂಕೀರ್ತನೆ ಹಾಗೂ ಸ್ತುತಿ. ಆರ್.ಭಟ್,ಪ್ರಸ್ತುತಿ ನೆಕ್ಕಿಲ ಇವರಿಂದ ಭಕ್ತಿಗಾನ ಕಾರ್ಯಕ್ರಮ ನಡೆಯಲಿದೆ. ನವರಾತ್ರಿ ಪೂಜೆ ಸರಿಯಾಗಿ ರಾತ್ರಿ 8 ಗಂಟೆಗೆ ನಡೆಯಲಿದೆ. ಪ್ರತೀ ದಿನ ಅನ್ನ ಪ್ರಸಾದ ಭೋಜನ ವ್ಯವಸ್ಥೆ ಇದೆ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಬೇಕು ಎಂದು ಶ್ರೀ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ವಿನಂತಿಸಿದ್ದಾರೆ.








