ಕಾಸರಗೋಡು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಅವರ ಕಾರು ಕಾಸರಗೋಡಿನಲ್ಲಿ ಅಪಘಾತಕ್ಕೀಡಾಗಿದ್ದು ಕಾರಿನಲ್ಲಿದ್ದ ಶಹೀದ್ ಹಾಗೂ ಇತರರು ಅಪಾಯದಿಂದ ಪಾರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪೆರಿಯ ಕಲ್ಯೊಟ್ನಲ್ಲಿ ಕೃಪೆಶ್ ಮತ್ತು ಸಜಿತ್ಲಾಲ್ ಅವರ 6 ನೇ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ
ಅವರ ಕನ್ನಡ ಭಾಷಣವನ್ನು ಮಲಯಾಳಂ ಭಾಷೆಗೆ ಭಾಷಾಂತರಿಸಲು ಅವರ ವಾಹನದ ಬೆಂಗಾವಲು ವಾಹನದ ಜೊತೆಯಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕಾಸರಗೋಡು ನಗರದ ಟ್ರಾಫಿಕ್ ಸಿಗ್ನಲ್ನಲ್ಲಿ ನಿಲ್ಲಿಸಿದ್ದ ಶಹೀದ್ ಅವರ ಕಾರಿಗೆ ಹಿಂಬದಿಯಿಂದ ಬಂದ ಇವರ ಸಂಬಂಧಿಕರ ಫೋರ್ಚೂನ್ ಕಾರು ಡಿಕ್ಕಿ ಹೊಡೆದಿದೆ. ಎರಡು ವಾಹನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದೆ ಪಾರಾಗಿದ್ದಾರೆ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಎಲಿಮಲೆ ಮತ್ತು ಸುಳ್ಯ ನಗರ ಪಂಚಾಯತ್ ಸದಸ್ಯ ಸಿದ್ದಿಕ್ ಕೊಕೊ ಅವರು ಸಂಚರಿಸುತ್ತಿದ್ದ ಇನ್ನೋವ ಐಕ್ರಾಸ್ ಹಾಗೂ ಇನ್ನೊಂದು ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.