ಸುಳ್ಯ: ಸುಳ್ಯ ಪಟ್ಟಣ ಪಂಚಾಯತ್ ಹಾಗೂ ಕೆ ವಿ ಜಿ ದಂತ ಮಹಾ ವಿದ್ಯಾಲಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಮತ್ತು ಸ್ವಚ್ಛತಾ ಜಾಗೃತಿ ಅಭಿಯಾನ ನಡೆಯಿತು. ನಗರದ ವಿವೇಕಾನಂದ ವೃತ್ತದಿಂದ ಕುರುಂಜಿಭಾಗ್ವರೆಗೆ ವಿವಿಧ ಕಡೆಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳು, ನಗರ ಪಂಚಾಯತ್ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಅಮರ ಸುಳ್ಯ ರಮಣೀಯ ತಂಡದ ಸದಸ್ಯರು ಹಾಗೂ ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಿದರು. ಬಳಿಕ ಪಟ್ಟಣ ಪಂಚಾಯತ್ ಸಭಾಂಗಣ ಜಾಗೃತಿ ಹಾಗು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.