ಹೈದರಾಬಾದ್: ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿದೆ.ಸನ್ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. 144 ರನ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 15.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 146 ಗಳಿಸಿ. ತವರು ನೆಲದಲ್ಲಿಯೇ
ಹೈದರಾಬಾದ್ ತಂಡ ಸೋಲನ್ನು ಅನುಭವಿಸಿದೆ. ಮುಂಬೈ ಪರ ರೋಹಿತ್ ಶರ್ಮ ಸತತ ಎರಡನೇ ಅರ್ಧ ಶತಕ ಸಿಡಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ರೋಹಿತ್ 46 ಎಸೆತಗಳಲ್ಲಿ 8 ಬೌಂಡರಿ ಹಾಗು 3 ಸಿಕ್ಸರ್ ನೆರವಿನಿಂದ 70 ರನ್ ಬಾರಿಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ 19 ಎಸೆತಗಳಲ್ಲಿ 5 ಬೌಂಡರಿ ಹಾಗು 2 ಸಿಕ್ಸರ್ ನೆರವಿನಿಂದ ಅಜೇಯ 40 ರನ್ ಚಚ್ಚಿದರು. ವಿಲ್ ಜಾಕ್ಸ್ 22 ರನ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ಪರ
ಹೆನ್ರಿಚ್ ಕ್ಲಾಸೆನ್ ನಡೆಸಿದ ದಿಟ್ಟ ಹೋರಾಟದ (71) ಹೊರತಾಗಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
ಪಂದ್ಯದ ಆರಂಭದಿಂದಲೇ ಮುಂಬೈ ಬೌಲರ್ಗಳು ಹೈದರಾಬಾದ್ನ ಸ್ಫೋಟಕ ಬ್ಯಾಟರ್ಗಳನ್ನು ಕಟ್ಟಿ ಹಾಕಿದರು.ಟ್ರಾವಿಸ್ ಹೆಡ್ (0), ಅಭಿಷೇಕ್ ಶರ್ಮಾ (8), ಇಶಾನ್ ಕಿಶನ್ (1), ನಿತೀಶ್ ಕುಮಾರ್ (2), ಅನಿಕೇತ್ ಶರ್ಮಾ (12) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಪರಿಣಾಮ 35ಕ್ಕೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.ಮತ್ತೊಂದೆಡೆ ದಿಟ್ಟ ಹೋರಾಟ ನೀಡಿದ ಕ್ಲಾಸೆನ್, ಅಭಿನವ್ ಮನೋಹರ್ ಜೊತೆ ಸೇರಿಕೊಂಡು ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಕ್ಲಾಸೆನ್ ಹಾಗೂ ಅಭಿನವ್ ಆರನೇ ವಿಕೆಟ್ಗೆ 99 ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು. ಕ್ಲಾಸೆನ್ 44 ಎಸೆತಗಳಲ್ಲಿ 71 (9 ಬೌಂಡರಿ, 2 ಸಿಕ್ಸರ್) ಗಳಿಸಿದರು.
ಅವರಿಗೆ ಉತ್ತಮ ಸಾಥ್ ನೀಡಿದ ಅಭಿನವ್ 43 ರನ್ ಗಳಿಸಿದರು. ಮುಂಬೈ ಪರ ಟ್ರೆಂಟ್ ಬೌಲ್ಟ್ ನಾಲ್ಕು ಮತ್ತು ದೀಪಕ್ ಚಾಹರ್ ಎರಡು ವಿಕೆಟ್ಗಳನ್ನು ಗಳಿಸಿದರು.











