ಸುಳ್ಯ:ಸುಳ್ಯ ಕಾಯರ್ತೋಡಿ ದೇವಸ್ಥಾನಕ್ಕೆ ತೆರಳುವ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಆರಂಭಗೊಂಡಿದೆ.
ಸರಕಾರದಿಂದ ಬಿಡುಗಡೆಯಾದ 25 ಕೋಟಿ ವಿಶೇಷ ಅನುದಾನದಲ್ಲಿ ರಸ್ತೆಗೆ ಶಾಸಕರು ಮೀಸಲಿರಿಸಿದ 20 ಲಕ್ಷ ಅನುದಾನ ಹಾಗೂ ನಗರ ಪಂಚಾಯತ್ ಸದಸ್ಯೆ ಪ್ರವಿತಾ ಪ್ರಶಾಂತ್ ಮ ಅನುದಾನ 4 ಲಕ್ಷ ಸೇರಿ ಒಟ್ಟು
24 ಲಕ್ಷ ಅನುದಾನದಲ್ಲಿ ರಸ್ತೆಯ ಕಾಂಕ್ರೀಟೀಕರಣ ನಡೆಯಲಿದೆ.
ಶಾಸಕರು ತಮ್ಮ ವಿಶೇಷ ಅನುದಾನದಲ್ಲಿ ಸುಳ್ಯ ನಗರದ ನಾಲ್ಕು ರಸ್ತೆಗಳ ಅಭಿವೃದ್ಧಿ ಗೆ ಅನುದಾನ ಒದಗಿಸಿದ್ದರು. ಕಾಯರ್ತೋಡಿ ರಸ್ತೆ
ಕಾಮಗಾರಿ ಆರಂಭದ ಸಂದರ್ಭದಲ್ಲಿ

ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕುಸುಮಾಧರ ಎ ಟಿ, ಪ್ರಮುಖರಾದ ನವೀನ್ ಕಾಯರ್ತೋಡಿ, ಸಚಿನ್ ದೆಂಗೋಡಿ, ದೀಪಕ್ ಆಚಾರ್ಯ, ಚಿದಾನಂದ ಕಾಯರ್ತೋಡಿ, ಭವಾನಿ ಪ್ರಸಾದ್, ವಾಸುದೇವ, ವೆಂಕಟ್ರಮಣ ದೇಂಗೋಡಿ, ತೀರ್ಥರಾಮ, ರತ್ನಾಕರ, ಅಣ್ಣು ಪೂಜಾರಿ,ಕಾಮಗಾರಿ ನಡೆಸುವ ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು. ಕಾಮಗಾರಿ ಸಮಯದಲ್ಲಿ ರಸ್ತೆಯು ಮುಚ್ಚಲಾಗುತ್ತದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.













