ಸುಳ್ಯ:ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನ ಆರನೇ ಡ್ರಾ ಎ.15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉದ್ಯಮ ಶೋ ರೂಂನಲ್ಲಿ ನಡೆಯಿತು. ಕಾರ್ಡ್ ಸಂಖ್ಯೆ S 2192 ಆಶಿಶ್ ರಾವ್ ದೊಡ್ಡೇರಿ ಅವರು ಒಂದು ಲಕ್ಷ ಮೌಲ್ಯದ
ಗೃಹೋಪಯೋಗಿ ವಸ್ತುಗಳ ಡ್ರಾ ವಿಜೇತ ಅದೃಷ್ಟವಂತರಾಗಿದ್ದಾರೆ. ವಿಜೇತರ ಆಯ್ಕೆಯನ್ನು ಹಿರಿಯ ಪತ್ರಕರ್ತ ಹರೀಶ್ ಬಂಟ್ವಾಳ್ ನೆರವೇರಿಸಿದರು.
ಆಶಿಶ್ ರಾವ್ ಅವರು ಕೆಲವು ದಿನಗಳ ಹಿಂದಷ್ಟೇ ಕಂತಿನ ಪೂರ್ತಿ ಹಣ ಪಾವತಿಸಿ ಸಾಮಾಗ್ರಿ ಪಡೆದುಕೊಂಡಿದ್ದರು. ಆದರೆ ಅವರು ಕಂತಿನ ಹಣ ಪೂರ್ಣವಾಗಿ ಕಟ್ಟಿದ ಕಾರಣ ಅವರ ನಂಬರನ್ನೂ ಡ್ರಾಗೆ ಹಾಕಲಾಗಿತ್ತು. ವಿಜೇತರಾಗಿರುವ ಅವರು ಈಗಾಗಲೇ 10 ಸಾವಿರ ರೂ.ಗಳ ಗೃಹೋಪಯೋಗಿ ಸಾಮಾಗ್ರಿ ಪಡೆದಿರುವುದರಿಂದ, ಇನ್ನು 90 ಸಾವಿರ ರೂ.ಗಳ ಗೃಹೋಪಯೋಗಿ ಸಾಮಾಗ್ರಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಫಲೋದ್ಯಮದ ಪಾಲುದಾರರು ತಿಳಿಸಿದ್ದಾರೆ. ಡ್ರಾ ಸಂಧರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಮಹೇಶ್ ಮೇರ್ಕಜೆ, ಮಹೇಶ್ ಉಗ್ರಾಣಿಮನೆ, ಸತೀಶ್ ಕಾಟೂರು, ಸತೀಶ್ ಹೊದ್ದೆಟ್ಟಿ, ಸಂಸ್ಥೆಯ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.
















