ಸುಳ್ಯ:ಬಹು ಕಾಲದ ಬೇಡಿಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ ನಿರ್ಮಾಣಗೊಂಡ ಸಂಪರ್ಕ ಸೇತುವೆಯ ಉದ್ಘಾಟನೆ ಮೇ.17ರಂದು ನಡೆಯಿತು.ಶಾಸಕಿ ಭಾಗೀರಥಿ ಮುರುಳ್ಯ ಸೇತುವೆಯನ್ನು ಉದ್ಘಾಟಸಿ ಮಾತನಾಡಿ
‘ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿದೆ. ಅರಮನೆಗಯ ಸೇತುವೆ ಸೇರಿ ಆದ್ಯತೆಯ ಮೇರೆಗೆ ಕ್ಷೇತ್ರದ
5 ಸೇತುವೆಗೆ ಅನುದಾನ ಮೀಸಲಿರಿಸಲಾಗಿದೆ. ಕ್ಷೇತ್ರದ ಎಲ್ಲಾ ಅಭಿವೃದ್ಧಿ ಬೇಡಿಕೆಗಳನ್ನು ಹಂತ ಹಂತವಾಗಿ ಪೂರೈಸುವ ಪ್ರಯತ್ನ ನಡೆಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ಸಾಕಷ್ಟು ಬೇಡಿಕೆಗಳು ಇನ್ನೂ ಇದೆ,ಅದನ್ನು ಪೂರ್ತಿ ಮಾಡಲು ಪ್ರಯತ್ನ ನಡೆಸಲಾಗುವುದು.ಅಭಿವೃದ್ಧಿ ನಿರಂತರವಾಗಿರಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ
ಮಾತನಾಡಿ’ ಚುನಾವಣೆ ಸಂದರ್ಭ ಹಾಗು ಇತರ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಶೇ.90 ಪೂರ್ತಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಉಳಿದ ಬೇಡಿಕೆಗಳನ್ನು ಈಡೇರಿಸುತ್ತೇವೆ.ಟೀಕೆಗಳನ್ನು ಮೀರಿ ನಿಂತು ಸ್ವಾಭಿಮಾನದಿಂದ ಕೆಲಸ ಮಾಡಿದರೆ ಊರು ಅಭಿವೃದ್ಧಿ ಮಾಡಲು ಸಾಧ್ಯ ಎಂದು ಅವರು ಹೇಳಿದರು.

ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಅರಂತೋಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಅಡ್ತಲೆ, ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಹೊಸೊಳಿಕೆ, ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಹಿರಿಯರಾದ ಎಲ್ಯಣ್ಣ ಅರಮನೆಗಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ,ದಯಾನಂದ ಕುರುಂಜಿ, ಕಿಶೋರ್ ಕುಮಾರ್ ಉಳುವಾರು, ಭಾರತಿ ಉಳುವಾರು, ಚಂದ್ರಶೇಖರ ಚೋಡಿಪಣೆ,ಪ್ರಸಾದ್ ಕಾಟೂರು, ಅಂಬೇಡ್ಕರ್ ರಕ್ಷಣಾ ವೇದಿಕೆಯ ಅಧ್ಯಕ್ಷ ನವೀನ್ ಕಲ್ಲುಗುಡ್ಡೆ, ಕಾರ್ಯದರ್ಶಿ ರಾಮಕೃಷ್ಣ ಅರಮನೆಯಗಯ,ಜಿಲ್ಲಾ ಕಾರ್ಯದರ್ಶಿ ತೇಜಕುಮಾರ್, ಉಪಾಧ್ಯಕ್ಷ ಚಂದ್ರಶೇಖರ ಮತ್ತಿತರರು ಭಾಗವಹಿಸಿದ್ದರು.ಸಮಾರಂಭದಲ್ಲಿ

ಅರಂತೋಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಅಡ್ತಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗೋವಿಂದ ಅಳವುಪಾರೆ ವಂದಿಸಿದರು.ರೇಷ್ಮ,ದೀಕ್ಷಿತಾ, ಪೂಜ,ಕಾವ್ಯ ಪ್ರಾರ್ಥಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.
ರಾಜ್ಯ ಸರಕಾರದ ವಿಪತ್ತು ಸಂಚಯನ ನಿಧಿ (ಮಿಟಿಗೇಷನ್ ಫಂಡ್)ಯಡಿ ಅರಮನೆಗಯದಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 1.75 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.ಬಳ್ನಾಡ್ ಹೊಳೆಗೆ ಅಡ್ಡಲಾಗಿ 30 ಮೀಟರ್ ಉದ್ದ ಹಾಗೂ 6.40 ಮೀಟರ್ ಅಗಲದ ಸೇತುವೆ ನಿರ್ಮಿಸಲಾಗಿದೆ.ಇಲ್ಲಿ ಜನರ ಸಂಚಾರಕ್ಕೆ ಶಾಶ್ವತ ಪರಿಹಾರ ಮಾಡಬೇಕು ಎಂಬುದು ಹಲವು ದಶಕಗಳ ಬೇಡಿಕೆಯಾಗಿತ್ತು.














