ಸುಳ್ಯ: ಸುಳ್ಯ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು ಪದೇ ಪದೇ ಟ್ರಾಫಿಕ್ ಸಮಸ್ಯೆಗಳು ಉಂಟಾಗಿ ರಸ್ತೆ ಸಂಚಾರದಲ್ಲಿ ಗೊಂದಲ ಮತ್ತು ಟ್ರಾಫಿಕ್ ಜಾಮ್ ಕಿರಿ ಉಂಟಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ವಿವಿಧ ವಾಹನ ಚಾಲಕರು ಹಾಗೂ ವರ್ತಕರ ಸಭೆ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಇಂದು ನಗರದ
ರಿಕ್ಷಾ ಚಾಲಕರ ಸಭೆಯು ಸುಳ್ಯ ಎಸ್ಐ ಸರಸ್ವತಿ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ನಡೆಯಿತು. ಸಭೆಯಲ್ಲಿ ರಿಕ್ಷಾ ಚಾಲಕರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳನ್ನು ತಿಳಿಸಿ ಕೊಡಲಾಯಿತು. ರಾತ್ರಿಯಲ್ಲಿ ಸಂಚಾರ ವೇಳೆಗೆ ಪ್ರಯಾಣಿಕರ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಅಲ್ಲದೇ ರಿಕ್ಷಾಗಳಲ್ಲಿ ಓವರ್ ಲೋಡ್ ಜನರನ್ನು ತುಂಬುವಂತಿಲ್ಲ ಎಂದು ಸೂಚಿಸಿದರು. ಆಟೋ ಚಾಲಕರು ಸಮವಸ್ತ್ರ ಸಮವಸ್ತ್ರ ಕಡ್ಡಾಯವಾಗಿ ಧರಿಸತಕ್ಕದ್ದು ಮತ್ತು ಅಟೋ ರಿಕ್ಷಾಗಳ ದಾಖಲೆ ಪತ್ರಗಳು ತಮ್ಮಲ್ಲಿ ಇರಬೇಕು ಅಲ್ಲದೇ ರಿಕ್ಷಾಗಳಲ್ಲಿ ಮಕ್ಕಳನ್ನು ಕರೆದೊಯ್ಯುವವರು ಮಕ್ಕಳ ಸುರಕ್ಷತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಸ್ಐ ಸರಸ್ವತಿಯವರು ತಿಳಿಸದರು. ಈ ಸಂದರ್ಭದಲ್ಲಿ ಸುಳ್ಯ ನಗರದ ಆಟೋ ಚಾಲಕ ಮಾಲಕರು ಮತ್ತು ಪೋಲಿಸ್ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.