ಸುಳ್ಯ: ಸುಳ್ಯ ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು ರಾತ್ರಿ, ಹಗಲೆನ್ನದೆ ನಿರಂತರ ಮಳೆ ಸುರಿಯುತಿದೆ. ಸುಳ್ಯ ತಾಲೂಕಿನಾದ್ತ ಭಾರೀ ಮಳೆಯಾಗುತ್ತಿದ್ದು ಮೂರು-ನಾಲ್ಕು ದಿನಗಳಿಂದ ಎಡೆಬಿಡದೆ ಧಾರಾಕಾರ ಮಳೆ ಸುರಿಯುತಿದೆ. ಕುಂಭದ್ರೋಣ ಮಳೆಯಿಂದ

ಜನರು ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಆಗಿದೆ. ಸೋಮವಾರ ಹಗಲು,ರಾತ್ರಿ ಸುರಿದ ಭರ್ಜರಿ ಮಳೆ ಮಂಗಳವಾರವೂ ಮುಂದುವರಿದಿದ್ದು ಧಾರಾಕಾರ ಮಳೆಯಾಗುತಿದೆ. ಭಾರೀ ಮಳೆಯಿಂದ ನದಿ, ಹಳ್ಳ ಕೊಳ್ಳಗಳು, ತೋಡುಗಳು ತುಂಬಿ ಹರಿಯುತಿದೆ. ಪಯಸ್ವಿನಿ ನದಿ, ಕಂದಡ್ಕ ಹೊಳೆ ಮೈದುಂಬಿ ಹರಿಯುತಿದೆ.ಸೋಮವಾರ ಸಂಜೆಯಿಂದ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಸಾರಲಾಗಿದೆ.ಸುಳ್ಯ ನಗರದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಯಲ್ಲಿ 128 ಮಿ.ಮಿ. ಮಳೆಯಾಗಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ನೂರಕ್ಕೂ ಅಧಿಕ ಮಿ.ಮಿ. ಮಳೆ ಸುರಿದಿದೆ.