ಸುಬ್ರಹ್ಮಣ್ಯ:ಸುಬ್ರಹ್ಮಣ್ಯ ಪರಿಸರದಲ್ಲಿ ಭಾರೀ ಮಳೆಯಾಗಿದ್ದು ನದಿಗಳು ಉಕ್ಕಿ ಹರಿದಿದೆ.ಆದಿ ಸುಬ್ರಹ್ಮಣ್ಯ ದೇವಾಲಯದ ಬಳಿ ದರ್ಪಣ ತೀರ್ಥ ನದಿ ಉಕ್ಕಿ ಹರಿದಿದ್ದು ವಿವಿಧ ಕಡೆಗಳಲ್ಲಿ ನೀರು ನುಗ್ಗಿದೆ. ನೀರು ನುಗ್ಗಿ ವಿವಿಧ ಕಡೆ ಬ್ಲಾಕ್ ಆಗಿದೆ.ಸುಬ್ರಹ್ಮಣ್ಯ ಆಸುಪಾಸು ಭಾರಿ ಪ್ರಮಾಣದ ಮಳೆ ಸುರಿದಿದ್ದು ಮಳೆ ನೀರು ತುಂಬಿ ಹರಿದಿದೆ. ಆದಿ ಸುಬ್ರಹ್ಮಣ್ಯ ದೇವಾಲಯದ ಬಳಿಯಲ್ಲಿ ನದಿ ಉಕ್ಕಿ ಹರಿದಿದೆ. ನೀರಿನ ಪ್ರವಾಹಕ್ಕೆ ದೇವರಗದ್ದೆ, ಕುಲ್ಕುಂದ ಸೇರಿ ವಿವಿಧ ಕಡೆ ರಸ್ತೆಗೆ, ಕೃಷಿ ತೋಟಗಳಿಗೆ ನೀರು ನುಗ್ಗಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post









