ತಿರುವನಂತಪುರಂ: ಅರಬ್ಬೀ ಸಮುದ್ರದಲ್ಲಿ ಕೇರಳ ಸಮೀಪ ಇರುವ ಲೋ ಪ್ರೆಷರ್ ಗಾಳಿಯ ತಿರುಗುವಿಕೆ ದುರ್ಬಲ ಆಗಿದ್ದು ಕೇರಳದ ಕೊಚ್ಚಿ – ಕೋಝಿಕ್ಕೋಡ್ ಮಧ್ಯ ಭೂಭಾಗ ಪ್ರವೇಶಿಸಿ ತಮಿಳುನಾಡು ಮೂಲಕ ಮುಂದುವರೆಯಬಹುದು. ಬಂಗಾಳಕೊಲ್ಲಿಯಲ್ಲಿ ಅಂಡಮಾನ್ ಉತ್ತರದಲ್ಲಿರುವ ಲೋ ಪ್ರೆಷರ್ ವಾಯು ಭಾರಕುಸಿತವಾಗಿ
ಚಂಡಮಾರುತ ಆಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದಕ್ಕೆ ಅರ್ನಬ್ ಚಂಡಮಾರುತ ಎಂದು ಹೆಸರಿಸಲಾಗಿದೆ. ಶ್ರೀಲಂಕಾ ಸಮೀಪ ನಾಳೆ ಗಾಳಿಯ ತಿರುಗುವಿಕೆ ಆರಂಭ ಆಗಲಿದ್ದು ಈ ಎರಡು ಸರ್ಕ್ಯುಲೇಷನ್ ಒಟ್ಟು ಸೇರಿ ಚಂಡಮಾರುತ ಆಗಿ ಅ. 27 ರಾತ್ರಿ ಆಂಧ್ರದ ಮಚಲೀಪಟ್ಟಣ ಮೂಲಕ ಚಲಿಸುವ ಸಾಧ್ಯತೆ ಇದೆ. ಆದರೇ ಇದು ಆರಂಭದಲ್ಲಿಯೇ ದುರ್ಬಲ ಆಗಬಹುದು. ಗಾಳಿಯ ತಿರುಗುವಿಕೆ ಆಂಧ್ರದಿಂದ ಮಧ್ಯಭಾರತ ಕಡೆಗೆ ಚಲಿಸುತ್ತಿದ್ದಂತೆ ಹಿಂಗಾರು ಮಾರುತಗಳನ್ನು ಸೆಳೆಯುವ ಕಾರಣ ದಕ್ಷಿಣ ಭಾರತದಲ್ಲಿ ಮಳೆ ಕಡಿಮೆ ಆಗಬಹುದು. ನವೆಂಬರ್ ಮೊದಲ ವಾರ ಇನ್ನೊಂದು
ಲೋ ಪ್ರೆಷರ್ ಆಗಲಿದ್ದು ಇದರಿಂದಾಗಿ ಹಿಂಗಾರು ಮಾರುತಗಳು ಸಹಜ ಸ್ಥಿತಿಗೆ ಬರಬಹುದು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರಕುಸಿತ ಆಗುತ್ತಿದ್ದಂತೆ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದೆ. ಕರಾವಳಿಯ ದ.ಕ. ಉಡುಪಿ ಉ.ಕ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗಿದೆ.ಕೇರಳ ಸಮೀಪದ ಲೋ ಪ್ರೆಷರ್ ಶಿಥಿಲ ಆಗಿದ್ದು ಮಳೆ ಕಡಿಮೆ ಆಗುವ ಸಾಧ್ಯತೆ ಇದೆ.ದ.ಕ,
ಕಾಸರಗೋಡು ಉಡುಪಿ ಉ.ಕ ಜಿಲ್ಲೆಗಳಲ್ಲಿ ಬಹುತೇಕ ಒಣಹವೆಯ ಮುನ್ಸೂಚನೆ ಇದೆ.ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಯೂ ಇದೆ ಎಂಬ ಮುನ್ಸೂಚನೆ ಇದೆ.









