ಮಂಗಳೂರು:ಕರಾವಳಿಯ ದ.ಕ ಕಾಸರಗೋಡು ಉಡುಪಿ ಉ.ಕ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ನಿನ್ನೆ ಸಂಜೆ ರಾತ್ರಿ ಮಳೆಯಾಗಿದೆ. ಮಲೆನಾಡಿನ ಜಿಲ್ಲೆಗಳಲ್ಲಿ, ಕಲ್ಯಾಣ ಕರ್ನಾಟಕ ಹೊರತುಪಡಿಸಿ ಒಳನಾಡಿನ ಜಿಲ್ಲೆಗಳಲ್ಲಿ ನಿನ್ನೆ ಮಳೆಯಾಗಿದೆ. ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿಯ ಉಡುಪಿ ಉ.ಕ ಜಿಲ್ಲೆಗಳಲ್ಲಿ ಹಗಲು ಮೋಡದ ವಾತಾವರಣ ಇರಲಿದ್ದು ತುಂತುರು – ಸಾಮಾನ್ಯ ಮಳೆಯ
ಮುನ್ಸೂಚನೆ ಇದೆ. ಉ.ಕ ಉಡುಪಿ ಕರಾವಳಿ ತೀರದ ತಾಲ್ಲೂಕುಗಳಲ್ಲಿ ರಾತ್ರಿಯೂ ಮಳೆಯಾಗಬಹುದು. ದ.ಕ ಕಾಸರಗೋಡು ಜಿಲ್ಲೆಗಳಲ್ಲಿ ಭಾಗಷಃ ಮೋಡದ ವಾತಾವರಣ ಇರಲಿದ್ದು ಹಗಲು ಅಲ್ಲಲ್ಲಿ ತುಂತುರು ಮಳೆಯಾಗಬಹುದು. ರಾತ್ರಿ ಗುಡುಗು ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ದ.ಕ.ದಲ್ಲಿ ನಿನ್ನೆಗಿಂತ ಮಳೆ ಪ್ರಮಾಣ ಕಡಿಮೆ ಇರಬಹುದು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 3-4 ದಿನ ಸಂಜೆ ಅಥವಾ ರಾತ್ರಿ ಮಳೆ ಮುಂದುವರೆಯಬಹುದು.
ಮಲೆನಾಡಿನ ಕೊಡಗು ಹಾಸನ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಹಗಲು ಮೋಡದ ವಾತಾವರಣ ಇರಲಿದ್ದು ಸಂಜೆ -ರಾತ್ರಿ ಒಂದೆರಡು ಗುಡುಗು ಮಳೆ ಮುನ್ಸೂಚನೆ ಇದೆ. ಅ 22 ತನಕ ಸಂಜೆ ಮಳೆ ಮುಂದುವರೆಯಬಹುದು.ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಮಳೆ ಮುನ್ಸೂಚನೆ ಇದೆ. ಚಾಮರಾಜನಗರ ಮೈಸೂರು,ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಮೈಸೂರು ಮಂಡ್ಯ ಬೆಂಗಳೂರು – ಗ್ರಾಮಾಂತರ ತುಮಕೂರು ಚಿತ್ರದುರ್ಗ ದಾವಣಗೆರೆ ವಿಜಯನಗರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಸಂಜೆಯ ನಂತರ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಉತ್ತರ ಒಳನಾಡಿನಲ್ಲಿ ಸಂಜೆ ಮೋಡ ಬರಲಿದ್ದು ಬಳ್ಳಾರಿ ಕೊಪ್ಪಳ ಹಾವೇರಿ ಗದಗ ಧಾರವಾಡ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇರಬಹುದು.ಒಳನಾಡಿನ ಜಿಲ್ಲೆಗಳ ಮುಂದಿನ 3-4 ದಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದ್ದರೂ ವಾಯುಭಾರ ಕುಸಿತದ ಪ್ರಭಾವದ ಭಾರಿ ಮಳೆ ಸಾಧ್ಯತೆಗಳು ಕಡಿಮೆ ಆಗುತ್ತಿವೆ.
ಅರಬ್ಬೀಸಮುದ್ರದಲ್ಲಿ ಕೇರಳ ಸಮೀಪ ಮೇಲ್ಮೈ ಸುಳಿಗಾಳಿಯ ತಿರುಗುವಿಕೆಯು ಸಮುದ್ರದಲ್ಲಿ ಪಶ್ಚಿಮದತ್ತ ಚಲಿಸುತ್ತಿದೆ. ಮತ್ತು ಉತ್ತರ ತಮಿಳುನಾಡು ಕರಾವಳಿಗೆ ಸಮೀಪ ಬಂಗಾಳಕೊಲ್ಲಿಯಲ್ಲಿ ಸರ್ಕ್ಯುಲೇಷನ್ ಇರುವುದರಿಂದ (ದಕ್ಷಿಣ ಭಾರತದಲ್ಲಿ)ಕರ್ನಾಟಕದಲ್ಲಿ ಇವತ್ತು ಸಂಜೆ – ರಾತ್ರಿ ಗುಡುಗು ಮಳೆಯಾಗುವ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಮುಂದಿನ 3-4 ದಿನ ಮುಂದುವರೆಯಬಹುದು. ಅರಬ್ಬೀಸಮುದ್ರದಲ್ಲಿ ಅ 22 ರ ಅಂದಾಜು ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿಯೂ ಅಂಡಮಾನ್ ಸಮೀಪ ಅ 25ರ ಅಂದಾಜು ಇನ್ನೊಮ್ಮೆ ವಾಯುಭಾರಕುಸಿತ ಆಗಲಿದ್ದು ಇದು ಉತ್ತರದತ್ತ ಚಲಿಸಿದರೆ ನಂತರ ಹಿಂಗಾರು ಮಾರುತಗಳು ದುರ್ಬಲ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.










