ಸುಳ್ಯ:ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಳದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಟ್ಟಿಪಳ್ಳದ ಯುವಸದನ ದಲ್ಲಿ ಜರುಗಿತು. ಸುಳ್ಯ ರೋಟರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ್ಯೊಪಾಧ್ಯಯಿನಿ ಜ್ಯೋತ್ನಾ ದಿನೇಶ್ ನೂತನ ಪದಾಧಿಕಾರಿಗಳಿಗೆ
ಪ್ರಮಾಣ ವಚನ ಭೋಧಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಸಭಾಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಲದ ಗೌರವಧ್ಯಕ್ಷೆ ಚಂದ್ರಾಕ್ಷಿ ಜೆ ರೈ ಶುಭ ಹಾರೈಸಿದರು.. ನೂತನ ಅಧ್ಯಕ್ಷೆ ಸವಿತಾ ಸತೀಶ್ ಎಲ್ಲರ ಸಹಕಾರ ಕೋರಿದರು. ಕಾರ್ಯದರ್ಶಿ ಅನನ್ಯ ಅನಿಲ್ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಸವಿತಾ ಲಕ್ಷ್ಮಣ್ ಪ್ರಾರ್ಥಿಸಿದರು. ಚಿತ್ರಲೇಖ ಮಡಪ್ಪಾಡಿ ಸ್ವಾಗತಿಸಿದರು.ರಮ್ಯಾ ರಾಮಣ್ಣ ಲೆಕ್ಕ ಪತ್ರ ಮಂಡಿಸಿದರು. ನೂತನ ಕಾರ್ಯದರ್ಶಿ ಸಂಧ್ಯಾ ಜೆ ವಂದಿಸಿದರು. ನೂತನ ಖಜಾoಜಿ ಸೌಮ್ಯ ಮಹೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.









