ಸುಳ್ಯ: ಸುಳ್ಯ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಶುಕ್ರವಾರ ರಾತ್ರಿ ಮಳೆಯಾಗಿದೆ. ಈ ಮೂಲಜ ನಿರಂತರ ಎರಡನೇ ದಿನವೂ ಮಳೆಯಾಗಿದೆ. ಕೆಲವೆಡೆ ಹನಿ ಮಳೆ, ಕೆಲವೆಡೆ ತುಂತುರು ಮಳೆ, ಸಾಧಾರಣ ಮಳೆಯಾಗಿದೆ. ಸುಳ್ಯ ನಗರದ ವಿವಿಧ ಕಡೆಗಳಲ್ಲಿ
ಮಳೆ ಸುರಿದಿದೆ. ಸುಳ್ಯದಲ್ಲಿ ಗುಡುಗು, ಸಿಡಿಲು ಉಂಟಾಗುತ್ತಿದ್ದು ಉತ್ತಮ ಮಳೆಯಾಗುವ ಲಕ್ಷಣ ಇದೆ. ಅದರಂತೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳು ಸೇರಿ ವಿವಿಧ ಕಡೆ ಮಳೆಯಾಗಿದೆ. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಾಗಿದೆ.ಬಳ್ಪ ಕರಿಕಳ ಸೇರಿಸಂತೆ ವಿವಿಧ ಭಾಗಗಳಲ್ಲಿ ಗಾಳಿಯೊಂದಿಗೆ ಉತ್ತಮ ಮಳೆಯಾಗಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿದಿದೆ. ಕಡಬದಲ್ಲಿಯೂ ಉತ್ತಮ ಮಳೆ ಸುರಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಬಿಸಿಲು ಮತ್ತು ಭಾರೀ ಸೆಕೆಗೆ ಬಸವಳಿದಿದ್ದ ಜನತೆಗೆ ಮಳೆ ಅಲ್ಪ ಸಂತಸ ನೀಡಿದೆ.