ಸುಳ್ಯ: ಸುಳ್ಯ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಶುಕ್ರವಾರ ರಾತ್ರಿ ಮಳೆಯಾಗಿದೆ. ಸುಳ್ಯ ನಗರದಲ್ಲಿ 21 ಮಿ.ಮಿ.ಮಳೆಯಾಗಿದೆ ಎಂದು ಸುಳ್ಯದಲ್ಲಿ ಮಳೆ ದಾಖಲೆ ಮಾಡುವ ಶ್ರೀಧರ ರಾವ್ ಹೈದಂಗೂರು ತಿಳಿಸಿದ್ದಾರೆ. ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಸುಮಾರು 20 ನಿಮಿಷಕ್ಕೂ ಹೆಚ್ಚು ಸಮಯ ಮಳೆ ಸುರಿದಿತ್ತು. ಸುಳ್ಯ ತಾಲೂಕಿನಾದ್ಯಂತ
ಮಳೆಯಾಗಿದೆ. ಕೆಲವೆಡೆ ಗುಡುಗು ಸಿಡಿಲು, ಗಾಳಿಯ ಅಬ್ಬರದೊಂದಿಗೆ ಉತ್ತಮ ಮಳೆಯಾಗಿದೆ. ಕೆಲವೆಡೆ ಸಾಧಾರಣ ಮಳೆ, ತುಂತುರು ಮಳೆಯಾಗಿದೆ. ಕಡಬ ತಾಲೂಕಿನಲ್ಲಿಯೂ ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿದಿದೆ. ಶನಿವಾರವೂ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇದೆ. ಮಧ್ಯಾಹ್ನದ ಬಳಿಕ ಅಥವಾ ಸಂಜೆಯ ವೇಳೆಗೆ ಮಳೆಯಾಗುವ ಸೂಚನೆ ಇದೆ. ಮಳೆ ಸುರಿದ ಕಾರಣ ಭಾರೀ ಸೆಕೆ ಸ್ವಲ್ಪ ಕಡಿಮೆಯಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಶುಕ್ರವಾರ ಮಳೆಯಾಗಿದೆ. ಏ.23ರ ತನಕ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.