ಸುಳ್ಯ: ಜಾತ್ಯಾತೀತ, ಮಾನವೀಯತೆಯ, ಪ್ರೀತಿ ವಿಶ್ವಾಸದ ಮತ್ತು ಸಮಾನತೆಯ ಸಂದೇಶ ಎಲ್ಲೆಡೆ ಪಸರಿಸಬೇಕಾಗಿರುವುದು ಇಂದಿನ ಕಾಲ ಘಟ್ಟದ ಅನಿವಾರ್ಯತೆಯಾಗಿದೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಹೇಳಿದ್ದಾರೆ.ಸುಳ್ಯ ಪೈಚಾರ್ನ ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಸಂಘಟಿಸಲಾದ ರಾಜ್ಯ ಮಟ್ಟದ ದಫ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ನಮ್ಮ ದೇಶದ
ಪ್ರಜಾಪ್ರಭುತ್ವ, ಮತ್ತು ಜಾತ್ಯಾತೀತ ತತ್ವದಿಂದ ಭಾರತ ಈ ವಿಶ್ವದಲ್ಲಿ ತಲೆ ಎತ್ತಿ ನಿಂತಿದೆ. ನಮ್ಮ ಪ್ರಜಾಪ್ರಭುತ್ವ, ಜಾತ್ಯಾತೀತ, ಸ್ವಾತಂತ್ರ್ಯ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ. ಮಾನವೀಯತೆ, ಪ್ರೀತಿ, ವಿಶ್ವಾಸ,ಸಮಾನತೆ, ಶಾಂತಿ ಎಲ್ಲರ ಹೃದಯದಲ್ಲಿ ಅರಳಬೇಕು ಎಂದು ಅವರು ಕರೆ ನೀಡಿದರು. ಮಾನವೀಯತೆಗೆ ಮಾದರಿ ಕೇರಳ ರಾಜ್ಯ ಎಂದ ಅವರು ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಅರ್ಜುನ್ ಎಂಬ ಸಹೋದರ ಕಣ್ಮರೆಯಾದಾಗ ಇಡೀ ನಾಡಿಗೆ ನಾಡೇ ಒಂದಾಗಿ ಪ್ರಾರ್ಥಿಸಿದ್ದು, ಸೌಧಿ ಜೈಲಿನಲ್ಲಿದ್ದ ವ್ಯಕ್ತಿಯನ್ನು ಬಿಡಿಸಲು ಮಿಡಿದ ನಾಡು ಕೆಲವೇ ದಿನದಲ್ಲಿ 30 ಕೋಟಿ ಹಣ ಸಂಗ್ರಹಿಸಿದ್ದು ಅದಕ್ಕೆ ಉದಾಹರಣೆ ಎಂದು ವಿಶ್ಲೇಷಿಸಿದರು.

ಸುಳ್ಯ ತಾಲೂಕು ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಕುಂಞಿಕೋಯ ಸಅದಿ ತಂಙಳ್ ದುಃವಾ ನೆರವೇರಿಸಿದರು.ನೂರುಲ್ ಹುದಾ ಮಾಡನ್ನೂರ್ ಪ್ರಾಂಶುಪಾಲರಾದ ಅಡ್ವಕೇಟ್ ಹನೀಫ್ ಹುದವಿ
ಮುಖ್ಯ ಭಾಷಣ ಮಾಡಿದರು.
ಪೈಚಾರ್ ಅಲ್-ಅಮೀನ್ ಯೂತ್ ಸೆಂಟರ್ನ ಅಧ್ಯಕ್ಷ ಅಬ್ದುಲ್ ಸತ್ತಾರ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪೈಚಾರ್ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಶಮೀರ್ ಅಹಮ್ಮದ್ ನಈಮಿ, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಪಿ, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಎಪಿಎಂಸಿ ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಅನ್ಸಾರಿಯಾ ಎಜ್ಯುಕೇಷನ್ ಸೆಂಟರ್ನ ಅಧ್ಯಕ್ಷ ಮಜೀದ್ ಜನತಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ,

ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ನಗರ ಪಂಚಾಯತ್ ಸದಸ್ಯರಾದ ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ಜಾಲ್ಸೂರುಗ್ರಾ.ಪಂ. ಸದಸ್ಯ ಮುಜೀಬ್ ಪೈಚಾರ್, ಸವಣೂರು ಗ್ರಾ.ಪಂ. ಸದಸ್ಯರಾದ ರಜಾಕ್ ಕೆನರಾ, ಎಂ.ಎ.ರಫೀಕ್, ಅರಿಯಡ್ಕ ಗ್ರಾ.ಪಂ. ಸದಸ್ಯ ರಹಿಮಾನ್ ಕಾವು, ಸೆಂಟ್ರಲ್ ಮುಸ್ಲೀಂ ಕಮಿಟಿ ದ.ಕ, ಉಡುಪಿಯ ಕಾನೂನು ಸಲಹೆಗಾರರಾದ ಮೂಸ ಕುಂಞಿ ಪೈಂಬೆಚ್ಚಾಲ್, ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಅಬೂಬಕ್ಕರ್ ಹಾಜಿ ಮಂಗಳ, ಹಾಜಿ ಕತ್ತರ್ ಇಬ್ರಾಹಿಂ ಹಾಜಿ, ಯೂಸೂಫ್ ಹಾಜಿ ಗೌಸಿಯಾ, ನಝೀರ್ ಶಾಂತಿನಗರ, ಡಾ.ಬಶೀರ್ ಆರ್.ಬಿ., ಅಶ್ರಫ್ ಟರ್ಲಿ, ಉನೈಸ್ ಪೆರಾಜೆ, ಲತೀಫ್ ಅಡ್ಕಾರ್, ಇಬ್ರಾಹಿಂ ಕರೀಂ ಕದ್ಕಾರ್, ಮಹಮ್ಮದ್ ಇಕ್ಬಾಲ್ ಎಲಿಮಲೆ, ಹನೀಫ್ ಹಾಜಿ, ಇಕ್ಬಾಲ್ ಟಿ.ಎಂ.ಕನಕಮಜಲು, ಫೈಝಲ್ ಕಟ್ಟೆಕ್ಕಾರ್, ಶಾಫಿ ಪ್ರಗತಿ, ಬದ್ರುದ್ದೀನ್ ಪೈಚಾರ್, ಅನ್ವರ್ ಪಂಜಿಕಲ್ಲು, ನಾಸಿರ್ ಪೆರಾಜೆ, ಸಾಜಿದ್.ಐ.ಜಿ, ರಿಫಾಯಿ.ಎಸ್.ಎ, ಇಕ್ಬಾಲ್ ಸುಣ್ಣಮೂಲೆ, ಅಬ್ದುಲ್ ಕುಂಞಿ ಮತ್ತಿತರರು ಉಪಸ್ಥಿತರಿದ್ದರು.

ಸಹ ಪ್ರಾಧ್ಯಾಪಕರಾದ ಡಾ.ಸಲೀಂ ಮಲಿಕ್ ಅವರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿಪೈಚಾರ್ನ ಮುಳುಗು ತಜ್ಞ ತಂಡವನ್ನು ಗೌರವಿಸಲಾಯಿತು.
ಅಲ್ ಅಮೀನ್ ಯೂತ್ ಸೆಂಟರ್ನ ಉಪಾಧ್ಯಕ್ಷ ಹನೀಫ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಅಬೂಸಾಲಿ, ಸದಸ್ಯರಾದ ಮುಜೀಬ್ ರಹಿಮಾನ್, ಕರೀಂ ಕೆ.ಎಂ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.