ಸುಳ್ಯ:ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ ಆಯ್ಕೆಯಾಗಿದ್ದಾರೆ.ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗರಿಷ್ಠ ಮತ ಪಡೆದು ಆಯ್ಕೆಯಾಗಿದ್ದಾರೆ. ಅವರು ಇತ್ತೀಚಿಗೆ
ಮಂಗಳೂರಿನ ಯೇನಪೋಯ ದಂತ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ರಾಷ್ಟ್ರೀಯ ಸಮ್ಮೇಳನದ ಸಂಘಟನಾ ಸಮಿತಿಯ ಭಾಗವಾಗಿದ್ದರು. ಡಾ.ಜಯಪ್ರಸಾದ ಆನೆಕಾರ ಅವರು ಸುಳ್ಯದ ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಮುಖ-ದವಡೆಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು. ಸುಳ್ಯದ ಆನೆಕಾರ ಡೆಂಟಲ್ ಕ್ಲಿನಿಕ್ ನ ವೈದ್ಯರಾಗಿದ್ದಾರೆ.